ವಿಟ್ಲದಲ್ಲಿ ಸ್ವಚ್ಛತಾ ಜಾಥಾ

0

puttur: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಟ್ಲ ,ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐ.ಎಮ್.ಸಿ ಸಮಿತಿ ಮತ್ತು ವಿಟ್ಲ ಪಟ್ಟಣ ಪಂಚಾಯತ್ ಸಹಯೋಗದೊಂದಿಗೆ ಸ್ವಭಾವ್ ಸ್ವಚ್ಛತಾ ಸಂಸ್ಕಾರ್ ಸ್ವಚ್ಛ್ಚತಾ ಕಾರ್ಯಕ್ರಮದಡಿಯಲ್ಲಿ ಅ.1ರಂದು 5 ಕೀ.ಮೀ ನಷ್ಟು ಬೃಹತ್ ಸ್ವಚ್ಛತಾ ಜಾಥಾವನ್ನು ವಿಟ್ಲ ನಗರದ ಮುಖ್ಯ ರಸ್ತೆಗಳಲ್ಲಿ ಹಮ್ಮಿಕೊಳ್ಳಲಾಯಿತು.

ಸಂಸ್ಥೆಯ ಐ.ಎಮ್.ಸಿ ಸದಸ್ಯರಾದ ಸಿ.ಎಪ್ ಸಿಕ್ವೇರಾ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛ ಪರಿಸರ ಸ್ವಚ್ಛ ನಗರ ಸಾರುವ ವಿವಿಧ ಘೋಷವಾಕ್ಯಗಳ ಫಲಕದೊಂದಿಗೆ ಸುಮಾರು 250ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಾಂಕೇತಿಕವಾಗಿ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸುತ್ತಾ ಸಾಗಿದರು.

ಪ್ರಾಚಾರ್ಯರಾದ ಹರೀಶ್ ರವರ ನೇತೃತ್ವದಲ್ಲಿ, ಎನ್.ಎಸ್.ಎಸ್ ಅಧಿಕಾರಿಯಾದ ಶರತ್ ಕುಮಾರ್ ಎಸ್.ಎಚ್ ರವರ ಸಾರಥ್ಯ ವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿ ಚಂದ್ರಶೇಖರ್ ವರ್ಮ,ಲೋಕೇಶ್ ಮತ್ತು ನೀಲೇಶ್ ಸಹಕರಿಸಿದರು.ಸಂಸ್ಥೆಯ ಎಲ್ಲಾ ಕಿರಿಯ ತರಬೇತಿ ಅಧಿಕಾರಿ ರವರು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಯವರು ಸಹಕರಿಸಿದರು.

LEAVE A REPLY

Please enter your comment!
Please enter your name here