ಕೋಡಿಂಬಾಳ ರಹ್ಮಾನಿಯ ಜುಮ್ಮಾ ಮಸೀದಿಯಲ್ಲಿ “ಮೆಹ್ಫಿಲೇ ತ್ವೈಬಾ” ಮಿಲಾದ್ ಫೆಸ್ಟ್-2024

0

ಕಡಬ: ಕೋಡಿಂಬಾಳ ರಹ್ಮಾನಿಯ ಜುಮ್ಮಾ ಮಸೀದಿಯಲ್ಲಿ ಹಿಮಾಯುತ್ತುಲ್ ಇಸ್ಲಾಂ ಮದರಸ ಕೋಡಿಂಬಾಳ ಮತ್ತು ಹಿದಾಯತ್ತುಲ್ ಇಸ್ಲಾಂ ಮದರಸ ಕೊಡೆಂಕೇರಿ ಇವುಗಳ ಜಂಟಿ ಆಶ್ರಯದಲ್ಲಿ ಮೆಹ್ಪಿಲೇ ತ್ವೈಬಾ ಮಿಲಾದ್ ಫೆಸ್ಟ್-2024 ಸೆ.29ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ಬಹು| ಹನೀಫ್ ಸಹದಿ (ಸದರ್ ಮುಹಲ್ಲಿಮ್ ಕೋಡಂಕೇರಿ ಮದರಸ )ಚಾಲನೆ ನೀಡಿದರು.

ಜಮಾಅತ್ ಪ್ರಧಾನ ಕಾರ್ಯದರ್ಶಿ ಝಿಯಾರ್ ಸ್ವಾಗತಿಸಿ. ಆರ್.ಜೆ.ಎಂ. ಕೋಡಿಂಬಾಳ ಇದರ ಖತೀಬರಾದ ಬಹು| ಅಬೂಬಕ್ಕರ್ ಮದನಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಝಲ್ ಕೋಡಿಂಬಾಳ ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಬಹು| ಇಲ್ಯಾಸ್ ಮದನಿ, ಕೋಶಾಧಿಕಾರಿ ಮಹಮ್ಮದ್ ಶರೀಫ್, ಅಬ್ದುಲ್ ಖಾದರ್, ಶೇಕ್ ಅಹ್ಮದ್, ಅಬೂಬಕ್ಕರ್ ಕೆ ಯಸ್, ಡಿ.ಎಂ. ಆಲಿ, ಹಾಜಿ, ಶರೀಫ್ ಕೆ.ಎಸ್. ರಫೀಕ್ ಅಜ್ಜಿಕಟ್ಟೆ, ನ್ಯಾಯವಾದಿ ಇಸಾಕ್, ಎನ್.ಐ.ವೈ.ಡಿ.ಸಿ.ಯ ಅಧ್ಯಕ್ಷರಾದ ಅಬೂಬಕ್ಕರ್ ಪಾಲಪ್ಪೆ, ಎಸ್.ವೈ. ಎಸ್ ಅಧ್ಯಕ್ಷರಾದ ನಯಾಜ್ ಕಜೆಮೂಲೆ, ಎಸ್ ಎಸ್ ಎಫ್. ಅಧ್ಯಕ್ಷರಾದ ನೌಶಾದ್, ಜಮಾಅತ್ ಹಿರಿಯರಾದ ಅಬ್ಲ್ ರಹಿಮಾನ್ ರವತಾರ್, ಬಪ್ಪು ಸಾಹೇಬ್, ಯೂಸುಫ್ ಸಾಹೇಬ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಮದರಸ ಮಕ್ಕಳ ವ್ಯವಿಧ್ಯಮಯ ಕಾರ್ಯಕ್ರಮಗಳು ನಡೆಯಿತು. ಆಕರ್ಷಕ ಕವ್ವಾಲಿ, ಬುರ್ದಾ ಅಲಪನೆ, ದಫ್ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮಕ್ಕೆ ನೆರೆಯ ಮಸೀದಿಯ ಅಧ್ಯಕ್ಷರಗಳು, ಖತಿಬರು ವಿವಿಧ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು. ಕಾರ್ಯಕ್ರಮದುದ್ದಕ್ಕೂ ವಿವಿಧ ರೀತಿಯ ಭೋಜನ ವ್ಯವಸ್ಥೆ, ತಂಪು ಪಾನೀಯ ಸಿಹಿ ತಿನಿಸುಗಳನ್ನು ವಿತರಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಸದರ್ ಮುಹಲ್ಲಿಮ್ ಬಹು| ಶಾಮ್ಮಸ್ ಸಹದಿ ನೆರವೇರಿಸಿದರು. ರಹ್ಮಾನಿಯ ಜುಮ್ಮಾ ಮಸೀದಿಯ ಮುಹಝಿನ್ ಬಹು| ಮುತ್ತಲಿಬ್ ಝೋಹರಿ ವಂದನಾರ್ಪನೆಗೈದರು.

LEAVE A REPLY

Please enter your comment!
Please enter your name here