ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರು ಕುರ್ಮಾವಾತರ ತಾಳಿದ ಮೂಲಸ್ಥಾನ ಶ್ರೀ ಕ್ಷೇತ್ರ ಮದಕ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ 2 ನೇ ವರ್ಷದ ಶ್ರೀ ಶರನ್ನವರಾತ್ರಿ ಮಹೋತ್ಸವ ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಮತ್ತು ವೇದಮೂರ್ತಿ ಕುಂಟಾರು ರವೀಶ ತಂತ್ರಿವರಿಯರ ಮಾರ್ಗದರ್ಶನದಲ್ಲಿ ನಡೆಯಲಿದೆ.
ವೈಭವದ ಮೆರವಣಿಗೆ;-
ಅ.3ರಂದು ಸಂಜೆ ಗಂ 3 ಕ್ಕೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಿಂದ ಭಜನೆ ಹಾಗೂ ವಾದ್ಯಘೋಷಗಳೊಂದಿಗೆ ಮದಕ ರಾಜರಾಜೇಶ್ವರಿ ಸಾನಿಧ್ಯಕ್ಕೆ ವೈಭವದ ಮೆರವಣಿಗೆ ಮೂಲಕ ತೆರಳಿ ಶ್ರೀರಾಜರಾಜೇಶ್ವರಿ ತಾಯಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ನಡೆಯುವ ಮೂಲಕ ಕಾರ್ಯಕ್ರಮ ಆರಂಭಗೊಂಡು, ಆಶ್ವಯುಜ ಶುದ್ಧ ದಶಮಿ 11 ರ ತನಕ ಪರ್ಯಂತವಾಗಿ 9 ದಿವಸಗಳ ಕಾಲ ಸಂಜೆ ಗಂ 4 ರಿಂದ 6.30 ರ ತನಕ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಅಲಂಕಾರ ಪೂಜೆ, ಹೂವಿನ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಸಹಸ್ರನಾಮಾದಿ ಪಾರಾಯಣಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.