ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.3 ರಿಂದ ಅ.11 ರವರೆಗೆ ನವರಾತ್ರಿ ಉತ್ಸವ

0

ಪುತ್ತೂರು: ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ನವರಾತ್ರಿ ಉತ್ಸವವು ಅ. 3 ರಿಂದ ಅ.11 ರವರೆಗೆ ನಡೆಯಲಿದೆ.

ಅ.3ರಂದು ಬೆಳಿಗ್ಗೆ ಶ್ರೀ ದೇವರ ಗದ್ದಿಗೆ ಏರುವುದು, ಅ.7ರಂದು ಸಂಜೆ ಮೂಡಾಯೂರು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಅ.11ರಂದು ಬೆಳಿಗ್ಗೆ ಕೊಪ್ಪರಿಗೆ ಏರುವುದು, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಶ್ರೀ ದರ್ಶನ ಪಾತ್ರಿಯವರಿಂದ ಶ್ರೀ ದೇವಿ ದರ್ಶನ ಮತ್ತು ಅಭಯ ನುಡಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಪ್ರತೀ ದಿನ ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆಯೆಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯು ತಿಳಿಸಿದೆ.

LEAVE A REPLY

Please enter your comment!
Please enter your name here