ಅಮೈ ಶಾಲೆಯಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಶಾರದಾ ಪೂಜೆ

0

ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೈ ಇಲ್ಲಿ ‘ರಾಷ್ಟ್ರಪಿತ’ ಮಹಾತ್ಮಾಗಾಂಧಿ’ ಯವರ 155ನೇ ಜಯಂತಿ ಹಾಗೂ ಭಾರತದ 2ನೇ ಪ್ರಧಾನ ಮಂತ್ರಿಯಾಗಿದ್ದ ‘ಲಾಲ್ ಬಹಾದ್ದೂರ್ ಶಾಸ್ತ್ರಿ’ ಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಮಹಮ್ಮದ್ ಶರೀಫ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ದಾನಿಗಳಾದ ಕೇಶವ ಗೌಡ ಅಮೈ, ಪದ್ಮಯ್ಯ ಗೌಡ ಅಮೈ, ಸವಣೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಜಯಂತ ವೈ, ಅಂಗನವಾಡಿ ಕಾರ್ಯಕರ್ತೆ ಗುಲಾಬಿ, ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋಧಾ ಎ, ಎಸ್ ಡಿ ಎಂಸಿ ಸದಸ್ಯ ಪ್ರಕಾಶ್ ಪಟ್ಟೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೇಶವ ಗೌಡ ಅಮೈ ಇವರು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳ ಪರವಾಗಿ 4ನೇ ತರಗತಿ ಸುಹೈಲ್ ಹಾಗೂ 5ನೇ ತರಗತಿ ಘನಶ್ರೀಯವರು ಗಾಂಧಿ ಜಯಂತಿಯ ಬಗ್ಗೆ ಭಾಷಣ ಮಾಡಿದರು. ಮುಖ್ಯ ಗುರುಗಳಾದ ಜಗನ್ನಾಥ ಎಸ್ ರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕಿ ಗುಣಶ್ರೀ ವಂದಿಸಿದರು. ಶಿಕ್ಷಕಿ ಶರ್ಮಿಳಾ ಮತ್ತು ಅಂಗನವಾಡಿ ಸಹಾಯಕಿ, ಅಡುಗೆ ಸಿಬ್ಬಂದಿಗಳು ಹಾಗೂ ಎಸ್ ಡಿ ಎಂಸಿ ಉಪಾಧ್ಯಕ್ಷೆ ಕೋಮಲ, ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಬಳಿಕ ‘ಶಾರದಾ ಪೂಜೆ’ ನಡೆಯಿತು. ಜಯಂತ ವೈ ತಮ್ಮ ತಂಡದಿಂದ ಭಜನಾ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಬಳಿಕ ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here