ನೆಲ್ಯಾಡಿ: ಶತಮಾನೋತ್ಸವ ಸಂಭ್ರಮದಲ್ಲಿರುವ ಕಡಬ ತಾಲೂಕಿನ ಆಲಂತಾಯ ಗ್ರಾಮದ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಗೆ ಎಂಆರ್‌ಪಿಎಲ್‌ನಿಂದ ಕಟ್ಟಡ ನಿರ್ಮಾಣಕ್ಕೆ 30 ಲಕ್ಷ ರೂ.ಅನುದಾನ ಮಂಜೂರಾಗಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಅ.3ರಂದು ಶಿಲಾನ್ಯಾಸ ನೆರವೇರಿಸಲಾಯಿತು.
ಅರ್ಚಕರಾದ ಸಂತೋಷ್ ತಂತ್ರಿ ವರ್ಕಾಡಿ, ಪ್ರಜ್ವಲ್ ಬನ್ನಿಂತಾಯ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಸಿ.ಬಿ.ಅವರು ಶಿಲಾನ್ಯಾಸ ನೆರವೇರಿಸಿದರು. ಶಾಲಾ ಮುಖ್ಯಶಿಕ್ಷಕಿ ಲವ್ಲಿ ಜೋಸ್, ನಿವೃತ್ತ ಶಿಕ್ಷಕರಾದ ಸಂಜೀವ ಪೂಜಾರಿ, ಸುಗಂಧಿ, ರಾಜೇಶ್ವರಿ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಅಜಿತ್‌ಕುಮಾರ್ ಪಾಲೇರಿ, ಕಾರ್ಯದರ್ಶಿ ಶಿವಪ್ರಸಾದ್, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಅಲಂಗಪೆ, ಬಾಬು ನಾಯ್ಕ ಅಲಂಗಪೆ, ಉದಯಕುಮಾರ್ ಭಟ್ಲಡ್ಕ, ಪ್ರಶಾಂತ್ ರೈ ಅರಂತಬೈಲು, ಅಚ್ಚುತ ನಾಯ್ಕ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಪಾಲೇರಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರಸಾದ್ ಕೆ.ಪಿ., ಮಾಜಿ ಸದಸ್ಯ ನೀಲಪ್ಪ ನಾಯ್ಕ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಪದ್ಮನಾಭ ಪೂಜಾರಿ, ಪುರುಷೋತ್ತಮ ಆಚಾರ್ಯ, ಊರಿನ ಪ್ರಮುಖರಾದ ಸವಿತಾ ಪುಲಾರ, ಮನೋಹರ ಜೈನ್, ಕಟ್ಟಡದ ಗುತ್ತಿಗೆದಾರರಾದ ಧವಳಗಿರಿ ಕನ್‌ಸ್ಟ್ರಕ್ಷನ್‌ನ ಮನೋಹರ್ ಕುಮಾರ್, ಸಹಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಪೂರ್ವ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಅಡುಗೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆ, ಮಕ್ಕಳು ಉಪಸ್ಥಿತರಿದ್ದರು.