ಮೊಟ್ಟೆತ್ತಡ್ಕ ಮಿಶನ್ ಮೂಲೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಾತೃದರ್ಶನ ಯಕ್ಷಗಾನ

0

ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.8ರಂದು ರಾತ್ರಿ ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀದೇವಿ ಮಹಿಳಾ ಯಕ್ಷ ತಂಡ, ಬಾಲವನ ಪುತ್ತೂರು ಇವರಿಂದ  ‘ಮಾತೃದರ್ಶನ’ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು. ಯಕ್ಷಗಾನದ ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ಅ.9ರಂದು ಸಂಜೆ ಶ್ರೀ ಕ್ಷೇತ್ರದಲ್ಲಿ ಬನ್ನೂರು ಬಲಮುರಿ ಶ್ರೀ ದುರ್ಗಾ ಗಣಪತಿ ಗಾನ ಕಲಾವೃಂದದ ಕಲಾವಿದರಿಂದ ಭಜನ್ ಸಂಧ್ಯಾ ಬಳಿಕ ಮಹಾಪೂಜೆ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here