ಅ.11: ಮರೀಲಿನಲ್ಲಿ ವಿವಿಧ ಇಲೆಕ್ಟ್ರೋನಿಕ್ಸ್ ಐಟಂಗಳ ಮಳಿಗೆ ಆಗಸ್ತ್ಯ ಇಲೆಕ್ಟ್ರೋನಿಕ್ಸ್ ಶುಭಾರಂಭ

0

ಪುತ್ತೂರು: ವಿವಿಧ ಕಂಪೆನಿಗಳ ಸುಪ್ರಸಿದ್ಧ ಇಲೆಕ್ಟ್ರೋನಿಕ್ಸ್ ಐಟಂಗಳ ಹಾಗೂ ಸಿಸಿ ಕ್ಯಾಮೆರಾ ಇದರ ಮಾರಾಟ ಹಾಗೂ ಸೇವಾ ಮಳಿಗೆ ಆಗಸ್ತ್ಯ ಇಲೆಕ್ಟ್ರೋನಿಕ್ಸ್ ಸಂಸ್ಥೆಯು ಅ.11ರಂದು ಮರೀಲು ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಮುಂಭಾಗದ ಈಶ್ವರ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ ಜೊತೆಗೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. 

ಸಂಸ್ಥೆಯಲ್ಲಿ ವಿವಿಧ ಕಂಪೆನಿಗಳ ಟಿವಿ, ವಾಷಿಂಗ್ ಮೆಷಿನ್, ಎಸಿ, ಮಿಕ್ಸಿ, ಸಿಸಿ ಕ್ಯಾಮರಾ ಹಾಗೂ ಇನ್ನಿತರ ಇಲೆಕ್ಟ್ರೋನಿಕ್ಸ್ ಉಪಕರಣಗಳು ಮಾರಾಟ ಹಾಗೂ ಸೇವೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.8050846994, 9481726994 ನಂಬರಿಗೆ ಸಂಪರ್ಕಿಸಬಹುದಾಗಿದೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಭಾರಂಭದ ಪ್ರಯುಕ್ತ ವಿಶೇಷ ಬಹುಮಾನ ನಿಮ್ಮದಾಗಿಸಿ..
ಸಂಸ್ಥೆಯು ಗ್ರಾಹಕರಿಗೆ ಬಹುಮಾನವಾಗಿ ಕೂಪನ್ ಡ್ರಾವನ್ನು ಆಯೋಜಿಸಿದ್ದು ಸಂಸ್ಥೆಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯೊಂದಿಗೆ ಈ ಕೂಪನ್ ಅನ್ನು ಲಗತ್ತಿಸಿದೆ. ಗ್ರಾಹಕರು ಈ ಕೂಪನ್ ಅನ್ನು ಭರ್ತಿ ಮಾಡಿ ಮಳಿಗೆಗೆ ಭೇಟಿ ಮಾಡಿ ಮಳಿಗೆಯಲ್ಲಿನ ಡ್ರಾಪ್ ಬಾಕ್ಸ್ ನಲ್ಲಿ ಹಾಕಿ ವಿಶೇಷ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಸಂಸ್ಥೆಯ ಮಾಲಕರು ಗ್ರಾಹಕರಿಗೆ ಒದಗಿಸಿಕೊಟ್ಟಿದ್ದು ಇದರ ಪ್ರಯೋಜನವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕಾಗಿದೆ

LEAVE A REPLY

Please enter your comment!
Please enter your name here