ಪುತ್ತೂರು: ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.9 ರಂದು ಶುದ್ಧ ಷಷ್ಠಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಕ್ಷೇತ್ರದ ಅರ್ಚಕ ಪ್ರವೀಣ್ ಶಂಕರ್ ಅವರ ನೇತೃತ್ವದಲ್ಲಿ ಬೆಳಗ್ಗೆ ವಾಹನ ಪೂಜೆ, ಶುದ್ಧ ಷಷ್ಠಿ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಷಷ್ಠಿ ಪೂಜೆಯ ಸೇವಾಕರ್ತ ಸಂತೋಷ್ ಕುಮಾರ್ ರೈ ಇಳಂತಾಜೆ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಮೋಹನದಾಸ ರೈ ನಳೀಲು, ಕಿಶೋರ್ ಕುಮಾರ್ ರೈ ,ಸತೀಶ್ ರೈ ನಳೀಲು, ಅರುಣ್ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಿಲಾಸ್ ರೈ ಪಾಲ್ತಾಡು, ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ, ಭಕ್ತಾದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನವರಾತ್ರಿ ಪ್ರಯುಕ್ತ ಹುಲಿ, ಸಿಂಹ ವೇಷಧಾರಿಗಳ ಕುಣಿತ ನಡೆಯಿತು.
ಮುಂದಿನ ವರ್ಷ ವಿವಿಧ ತಂಡಗಳ ಹುಲಿ,ಸಿಂಹ ಕುಣಿತ ಆಯೋಜನೆ
ಮುಂದಿನ ವರ್ಷ ನವರಾತ್ರಿ ಸಂಧರ್ಭದಲ್ಲಿ ವಿವಿಧ ತಂಡಗಳ ಹುಲಿ ,ಸಿಂಹ ಕುಣಿತ ಪ್ರದರ್ಶನ ಆಯೋಜನೆ ಮಾಡಲಾಗುವುದು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ತಿಳಿಸಿದ್ದಾರೆ.