ಪುತ್ತೂರು: ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಅಧೀನದ ಡಾ.ಹರ್ಷ ಕುಮಾರ್ ರೈ ಮಾಡಾವು ಮಾಲಕತ್ವದ ಜನ್ಮಭೂಮಿ ಪೆಟ್ರೋಲಿಯಂ ಸಂಸ್ಥೆಯು ಕೆಯ್ಯೂರು ಗ್ರಾಮದ ಮಾಡಾವುನಲ್ಲಿ ಅ.11 ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
ಮಾಲಕರ ತಾಯಿ ಜಯಂತಿ ಎಂ.ರೈ ಮತ್ತು ತಂದೆ ಕೆ.ಎಂ.ಮೋಹನ ರೈಯವರು ದೀಪ ಪ್ರಜ್ವಲನೆಯ ಮೂಲಕ ಸಂಸ್ಥೆಯನ್ನು ಶುಭಾರಂಭ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಭಾರತ್ ಪೆಟ್ರೋಲಿಯಂನ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕರಾದ ಅಮೋಲ್ ಬೊಸ್ಲೆ, ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಐಎಎಸ್, ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘ ನವದೆಹಲಿ ಇದರ ರಾಷ್ಟ್ರೀಯ ಕಾರ್ಯದರ್ಶಿ ವಿಶ್ವಾಸ್ ಶೆಣೈ ಹಾಗೇ ಗೌರವ ಉಪಸ್ಥಿತಿಯಲ್ಲಿ ಮಂಗಳೂರು ಮಾಸ್ ಅಧ್ಯಕ್ಷ ಸವಣೂರು ಸೀತಾರಾಮ ರೈ, ಕೆಎಂಎಸ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಡಾವು ಬದ್ರಿಯಾ ಜುಮ್ಮ ಮಸೀದಿ ಅಧ್ಯಕ್ಷ ಹುಸೈನಾರ್ ಹಾಜಿ ಸಂತೋಷನಗರ, ಕೆಯ್ಯೂರು ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆಂಗುಡೇಲು, ಕೆಯ್ಯೂರು ಗ್ರಾಪಂ ಸದಸ್ಯ ತಾರಾನಾಥ ಕಂಪ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸುವ ಮೂಲಕ ಪ್ರೋತ್ಸಾಹ ನೀಡುವಂತೆ ಮಾಲಕರಾದ ಡಾ.ಹರ್ಷ ಕುಮಾರ್ ರೈ ಮಾಡಾವು ಮತ್ತು ಆಡಳಿತ ಮತ್ತು ಸಿಬ್ಬಂದಿ ವರ್ಗದ ಪ್ರಕಟಣೆ ತಿಳಿಸಿದೆ.
ಡೀಸೆಲ್ ಮತ್ತು ಪೆಟ್ರೋಲ್ ವಿತರಕರು
ಜನ್ಮಭೂಮಿ ಪೆಟ್ರೋಲಿಯಂ ಬಂಕ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದೊರೆಯಲಿದೆ. ಸುಸಜ್ಜಿತ ಪೆಟ್ರೋಲ್ ಬಂಕ್ ಇದಾಗಿದ್ದು ಆತ್ಯಾಧುನಿಕ ಟೆಕ್ನಾಲಜಿಯೊಂದಿಗೆ ಸೋಲಾರ್ ಪವರ್ ಒಳಗೊಂಡಿದೆ. ಉಚಿತ ನೈಟ್ರೋಜನ್ ಏರ್, ಶುದ್ಧೀಕರಿಸಿದ ಕುಡಿಯುವ ನೀರು, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಡಿಬೆಟ್, ಕ್ರೆಡಿಟ್ ಕಾರ್ಡ್ ಸೌಲಭ್ಯದೊಂದಿಗೆ ಸಂಪೂರ್ಣ ಸಿ.ಸಿ ಕ್ಯಾಮಾರ ಹೊಂದಿದೆ.