ನಾಳೆ ಪುತ್ತೂರು ಶಾರದೋತ್ಸವದ ವೈಭವದ ಶೋಭಾಯಾತ್ರೆ-ಈ ಬಾರಿ ಹಲವು ಆಕರ್ಷಣೆ:ಕೆದಂಬಾಡಿಗುತ್ತು ಸೀತಾರಾಮ ರೈ

0

ಪುತ್ತೂರು: ಅ. 12ರಂದು ಸಂಜೆ ಜರಗುವ ಪುತ್ತೂರು ಶಾರದೋತ್ಸವದ ವೈಭವದ ಮೆರವಣಿಗೆಯಲ್ಲಿ ಸರ್ವ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ವಿನಂತಿಸಿದ್ದಾರೆ.


ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ:
ಕಳೆದ ವರ್ಷದಿಂದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆಯನ್ನು ವೈಭವದಿಂದ ನೆರವೇರಿಸಲಾಗುತ್ತಿದ್ದು, ಈ ವರ್ಷ ಕರ್ನಾಟಕದ ವಿವಿಧ ಜಿಲ್ಲೆಗಳ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳಲ್ಲದೇ ಪುತ್ತೂರಿಗೆ ಪ್ರಪ್ರಥಮ ಬಾರಿಗೆ ಕೇರಳದ ತ್ರಿಶೂರಿನ ಕಥಕ್ಕಳಿ, ಪಂದಳಾಟ್ಟಂ, ತಿರಾಯಾಟ್ಟಮ್, ಸಿಂಗಾರಿ ಕಾವಡಿ ಮುಂತಾದ ಅನೇಕ ಕಲಾಪ್ರಕಾರಗಳನ್ನು ಆಹ್ವಾನಿಸಲಾಗಿದೆ. ಪುತ್ತೂರು ಪೇಟೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸಂಜೆ 5 ಗಂಟೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೇಲುರವರು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಈ ವರ್ಷ ಸಂಪೂರ್ಣ ಶೋಭಾಯಾತ್ರೆಯನ್ನು ಸರಿಯಾದ ಸಮಯಕ್ಕೆ ಆರಂಭಿಸಲಾಗುತ್ತಿದೆ. ಡಿ.ಜೆ. ಮತ್ತು ಪಟಾಕಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತಿ, ಸಂಸ್ಕೃತಿ ಮತ್ತು ಧಾರ್ಮಿಕತೆಯ ಅನಾವರಣವಾಗಲಿರುವ ಶೋಭಾಯಾತ್ರೆಯನ್ನು ಬಹಳ ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ಸ್ವಯಂ ಸೇವಕರ ವಿಶೇಷ ತಂಡವೊಂದು ಇದರ ಸಂಪೂರ್ಣ ನಿರ್ವಹಣೆಯನ್ನು ಮಾಡಲಿದೆ. ಈ ಶೋಭಾಯಾತ್ರೆ ಪುತ್ತೂರಿನ ಮಾದರಿ ಕಾರ್ಯಕ್ರಮವಾಗಿ ಹತ್ತೂರಿನ ಜನ ಪುತ್ತೂರಿಗೆ ಬರುವಂತಾಗಬೇಕು ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here