ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಮಲ್ಟಿ ಬ್ರಾಂಡೆಡ್ ಮಳಿಗೆ ಪಶುಪತಿ ಶೋರೂಂನಲ್ಲಿ ತಿಂಗಳ ಅದೃಷ್ಟ ಚೀಟಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

0

ಪುತ್ತೂರು: ದರ್ಬೆ ಫಿಲೋಮಿನಾ ಕಾಲೇಜಿನ ಮುಂಭಾದಲ್ಲಿ ಕಾರ್ಯಾಚರಿಸುತ್ತಿರುವ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ನ ಮಲ್ಟಿ ಬ್ರಾಂಡೆಡ್ ಮಳಿಗೆ ಪಶುಪತಿ ಶೋರೂಂನಲ್ಲಿ ಗ್ರಾಹಕರ ತಿಂಗಳ ಅದೃಷ್ಟ ಚೀಟಿ ಡ್ರಾದ ಪ್ರಥಮ ಡ್ರಾ ಈಗಾಗಲೇ ಜರಗಿದ್ದು ಇದರ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಶೋರೂಂನಲ್ಲಿ ಜರಗಿತು.

ಪ್ರಥಮ ಅಧೃಷ್ಟ ಗ್ರಾಹಕ ಬಹುಮಾನ ವಿಜೇತ ಪವನ್ ಕೆಮ್ಮಿಂಜೆ, ದ್ವಿತೀಯ ಅದೃಷ್ಟ ಗ್ರಾಹಕ ಬಹುಮಾನ ವಿಜೇತ ಕಿಶೋರ್ ಕುಕ್ಕರಬೆಟ್ಟು, ತೃತೀಯ ಅದೃಷ್ಟ ಗ್ರಾಹಕ ಬಹುಮಾನ ವಿಜೇತ ರಂಜನ್ ಕುಂಬ್ರರವರಿಗೆ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿ ಇದರ ಸಹಾಯಕ ಪ್ರಾಧ್ಯಾಪಕರಾದ ಡಾ.ಮನುಜೇಶ್ ರವರು ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರೆ ಅನ್ನಪೂರ್ಣ ಶರ್ಮ, ಸಾರ್ವಜನಿಕ ಸಂಪರ್ಕಾಧಿಕಾರಿ ಕವಿತ ದಿನಕರ್, ಬಿಲ್ಲಿಂಗ್ ವಿಭಾಗದ ಸಿಬ್ಬಂದಿ ನಯನಾ ಕೆ.ಎಸ್ ರವರ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಳಿಗೆಗೆ ಆಗಮಿಸುವ ಖರೀದಿದಾರರು ಮಾತ್ರವಲ್ಲ ಮಳಿಗೆಗೆ ಭೇಟಿ ನೀಡಿದ ಪ್ರತಿಯೊಬ್ಬ ಗ್ರಾಹಕರಿಗೆ ಕೂಪನ್ ನೀಡುವ ವ್ಯವಸ್ಥೆಯನ್ನು ಸಂಸ್ಥೆಯಿಂದ ಮಾಡಲಾಗಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಹೀಗೆ ಮೂರು ಬಹುಮಾನಗಳನ್ನು ಗ್ರಾಹಕರಿಗೆ ಪ್ರತಿ ತಿಂಗಳು ನೀಡುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here