ಅ.17: ಪಡುಮಲೆ ಪುದ್ವಾರ್ ಮೆಚ್ಚಿ ನೇಮ

0

ಬಡಗನ್ನೂರು:  ಪಡುಮಲೆ  ಶ್ರೀ ಪೂಮಾಣಿ ಕಿನ್ನಿಮಾಣಿ, ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಬದಿನಾರು ಪಡುಮಲೆಯಲ್ಲಿ ಪೂರ್ವಶಿಷ್ಠಾ ಸಂಪ್ರದಾಯದಂತೆ ವರ್ಷಂಪ್ರತಿ ನಡೆಯುವ ಶ್ರೀ ಪಿಲಿಚಾಮುಂಡಿ ( ಶ್ರೀ ರಾಜನ್ ದೈವ ) ದೈವದ ಪುದ್ವಾರ್ ಮೆಚ್ಚಿ ನೇಮವು ಅ.17  ತುಲಾ ಸಂಕ್ರಮಣದ ದಿನದಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.17 ರಂದು ಬೆಳಗ್ಗೆ ಗಂ 9 ರಿಂದ ಗಣಪತಿ ಹೋಮ, ಬಳಿಕ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.

ಮಧ್ಯಾಹ್ನ 12 ರಿಂದ ರಾಜನ್ ದೈವದ ಪುದ್ವಾರ್ ಮೆಚ್ಚಿ ನೇಮ  ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ನೇಮೋತ್ಸವದಲ್ಲಿ ಭಾಗವಹಿಸಿ,  ಶ್ರೀ ದೈವದ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here