90 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ಪ್ರಪ್ರಥಮ ಶಾಖೆ ಪುತ್ತೂರಿನಲ್ಲಿ ಉದ್ಘಾಟನೆ…

0

*ನೂತನ ಶಾಖೆಯ ಉದ್ಘಾಟನೆ ನೆರವೇರಿಸಿದ ಪೌರಾಯುಕ್ತ ಮಧು ಎಸ್ ಮನೋಹರ್
*ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಸಿಗಲಿದೆ ಅತ್ಯುತ್ತಮ ದರದಲ್ಲಿ ಗೃಹ ,ಚಿನ್ನಾನಭರಣ , ಕಾರು ಹಾಗೂ ಎಜ್ಯುಕೇಶನ್ ಲೋನ್ ಸಹಿತ ಇನ್ನೂ ಹಲವು ಸೇವೆಗಳು ತ್ವರಿತ ರೀತಿಯಲ್ಲಿ…

ಪುತ್ತೂರು : ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲೇ ಅತ್ಯಂತ ಜನಪ್ರಿಯವಾಗಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ದ.ಕ ಜಿಲ್ಲೆಯ ಐದನೇಯ ಶಾಖೆಯೂ ಪುತ್ತೂರಿನ ಪಡೀಲ್ ವಿಘ್ನೇಶ್ವರ ಸಂಕೀರ್ಣ ಇದರ ನೆಲ ಮಹಡಿಯಲ್ಲಿ ಅ.18 ರಂದು ಶುಭಾರಂಭಗೊಂಡಿತು.

ನೂತನ ಬ್ಯಾಂಕ್ ಶಾಖೆಯ ಉದ್ಘಾಟನೆಯನ್ನು ನಗರಸಭಾ ಪೌರಾಯುಕ್ತರಾದ ಮಧು ಎಸ್ ಮನೋಹರ್ ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲನೆ ನೆರವೇರಿಸಿದರು. ವಿಘ್ನೇಶ್ವರ ಸಂಕೀರ್ಣದ ಮಾಲೀಕ ,ಉದ್ಯಮಿ ಸುಧೀರ್ ಶೆಟ್ಟಿ ತೆಂಕಿಲ ಎಟಿಎಂ ರೂಂ ಉದ್ಘಾಟನೆ ನೆರವೇರಿಸಿದರು.


ವಲಯ ವ್ಯವಸ್ಥಾಪಕ (ಹುಬ್ಬಳ್ಳಿ ವಲಯ ) ಸುಚೇತ್ ಡಿಸೋಜ ಸುಭದ್ರ ಕೋಣೆಯ ಉದ್ಘಾಟನೆ ನೆರವೇರಿಸಿದರು. ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಹಾಗೂ ನಹುಷಾ ಪಿ.ವಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು.

ಸೇಡಿಯಾಪು ಕೋಸ್ಟಲ್ ಕೋಕನಟ್ ಇಂಡಸ್ಟ್ರಿ ಮಾಲೀಕ ಡೆನ್ನಿಸ್ ಮಸ್ಕರೇನಸ್ , ಉದ್ಯಮಿ ಜಾನ್ ಕುಟಿನ್ಹಾ , ಉದ್ಯಮಿ ಪ್ರಶಾಂತ್ ಶೆಣೈ ,ಬನ್ನೂರು ಚರ್ಚ್ ಉಪಾಧ್ಯಕ್ಷ ತೋಮಸ್ , ನಗರಸಭಾ ಸದಸ್ಯ ಪದ್ಮನಾಭ ನಾಯ್ಕ್ , ಹರಿಪ್ರಸಾದ್ ಬೊಳ್ವಾರ್ , ಎಂಜಿನಿಯರ್ ರಕ್ಷಿತ್ ಕೆವಿ , ಶ್ರೀನಿವಾಸ್ ಸಾಮಂತ , ಸಂಕೀರ್ಣ ಮಾಲೀಕ ಸುಧೀರ್ ಶೆಟ್ಟಿ ಯವರ ಪತ್ನಿ ಶಮಿತಾ ಸುಧೀರ್ ಶೆಟ್ಟಿ ಹಾಗೂ ಪುತ್ರಿ ವಿಶೃತಿ ಶೆಟ್ಟಿ ಸಹಿತ ಬ್ಯಾಂಕ್‌ ಸಿಬ್ಬಂದಿಗಳು ಹಾಜರಿದ್ದರು.


ವಲಯವ ವ್ಯವಸ್ಥಾಪಕ ಸುಚೇತ್ ಡಿಸೋಜ ಮತ್ತು ಪುತ್ತೂರು ಶಾಖೆಯ ಪ್ರಬಂಧಕ ಸುದರ್ಶನ್ ಎ ಅತಿಥಿಗಳನ್ನು ಗೌರವಿಸಿ , ಸಹಕಾರ ಯಾಚಿಸಿದರು. ಉದ್ಯಮಿ ಜಾನ್ ಕುಟಿನ್ಹಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here