ಅನಿವಾಸಿ ಭಾರತೀಯ ಕಡಮಜಲು ವಿಪುಲ್ ಎಸ್ ರೈ ಯವರಿಗೆ ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದಿಂದ ಅಭಿನಂದನೆ

0

ಪುತ್ತೂರು: ಪ್ರಧಾನಿ ಮೋದಿಯವರ 2024ರ ಅಮೆರಿಕ ಭೇಟಿಯ ಸಂದರ್ಭದಲ್ಲಿ ಅಲ್ಲಿಯ ಕಾರ್ಯಕ್ರಮವನ್ನು ಆಯೋಜಿಸಿದ ತಂಡದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕಡಮಜಲು ವಿಪುಲ್ ಎಸ್ ರೈ ರವರನ್ನು ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಅ. 17 ರಂದು ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ  ಅಧ್ಯಕ್ಷ ಶರತ್ ಗೌಡ ಗುತ್ತು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಓರ್ವ ಅನಿವಾಸಿ ಭಾರತೀಯನಾಗಿದ್ದುಕೊಂಡು ಅಮೆರಿಕದ ನೆಲದಲ್ಲಿ ವಿಪುಲ್ ರವರು ಭಾರತದ ಸಂಸ್ಕಾರ, ಭಾರತೀಯತೆಯ ಉಳಿಯುವಿಕೆಗಾಗಿ ಮಾಡುತ್ತಿರುವ ಸೇವೆಗಳು ಹಾಗೂ ಭಾರತದಲ್ಲಿ ನಡೆಯುವ ಪ್ರಮುಖ ಚುನಾವಣೆಗಳಲ್ಲಿ ಅನಿವಾಸಿ ಭಾರತೀಯರನ್ನು ಸಂಘಟಿಸುವಲ್ಲಿ ನಿರ್ವಹಿಸುತ್ತಿರುವ ಪಾತ್ರ ಅಭಿನಂದನಾರ್ಹವಾದುದು ಎಂದ ಅವರು ಅಮೆರಿಕದಿಂದ ಬಂದು ತಿಂಗಳಾಡಿ ಬೂತ್ ನಲ್ಲಿಯೂ ವಿಪುಲ್ ರೈ ಕಾರ್ಯನಿರ್ವಹಿಸಿದ ಬಗ್ಗೆ ಶ್ಲಾಘಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪುತ್ತೂರು ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ ರವರು ಮಾತನಾಡಿ ಕಡಮಜಲು ವಿಪುಲ್ ರೈಯವರು ಭಾರತೀಯ ಸಂಸ್ಕೃತಿ, ಕನ್ನಡಪರ ಸೇವೆ, ತುಳು ಭಾಷೆಯ ಸೇವೆ, ಹಾಗೂ ಅಮೆರಿಕದಲ್ಲಿದ್ದುಕೊಂಡು ಪಕ್ಷದ ಸೇವೆಯನ್ನು ಯಾವ ರೀತಿಯಲ್ಲಿ ಮಾಡುತ್ತಿದ್ದರು ಎಂಬುದನ್ನು ವಿವರಿಸಿದರು. ಸನ್ಮಾನವನ್ನು ಸ್ವೀಕರಿಸಿದ ಕಡಮಜಲು ವಿಪುಲ್ ಎಸ್. ರೈಯವರು ಮಾತನಾಡಿ ಈ ಅಭಿನಂದನಾ ಕಾರ್ಯಕ್ರಮವು ನಿಜವಾಗಿಯೂ ನನಗೆ ಬಹಳ ಅರ್ಥಪೂರ್ಣವಾಗಿ ಕಂಡುಬಂದಿದೆ. ಹುಟ್ಟೂರಿನ ಈ ಸನ್ಮಾನ ಅತ್ಯಂತ ಖುಷಿ ಕೊಟ್ಟಿದೆ, ನಮ್ಮನ್ನ ಇನ್ನಷ್ಟು ದೇಶ ಸೇವೆ, ಪಕ್ಷದ ಸೇವೆಯನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು.  ವೇದಿಕೆಯಲ್ಲಿ ವಿಪುಲ್ ಎಸ್ ರೈ ಯವರ ಹೆತ್ತವರಾದ ಕಡಮಜಲು ಸುಭಾಸ್ ರೈ, ಪ್ರೀತಿ ಎಸ್ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಮಹಿಳಾ ಮೋರ್ಚ ಕೋಶಾಧಿಕಾರಿ ಗೀತಾ ಸತೀಶ್ ರೈ ಗುತ್ತು, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮಿ ಬಲ್ಲಾಳ್ ಬೀಡು, ಪಂಚಾಯತ್ ಸದಸ್ಯರುಗಳಾದ ರೇವತಿ ಬೋಳೋಡಿ ಕೃಷ್ಣಕುಮಾರ್ ಇದ್ಯಪೆ, ಬಿಜೆಪಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಎಲ್ ಡಿ ಬ್ಯಾಂಕ್ ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ, ಕೆದಂಬಾಡಿ ಶಕ್ತಿ ಕೇಂದ್ರ 187 ಬೂತ್ ಅಧ್ಯಕ್ಷರಾದ ಅಮರ್ ರೈ ದರ್ಬೆ, ಪ್ರಧಾನ ಕಾರ್ಯದರ್ಶಿ ಸುಭಾಶ್ ರೈ ಮಿತ್ತೋಡಿ, ಬೂತಿನ ಮನ್ ಕಿ ಬಾತ್ ಪ್ರಮುಖರಾದ ಹರೀಶ್ ರೈ ಮಿತ್ತೋಡಿ, 188 ಬೂತ್ ಅಧ್ಯಕ್ಷರಾದ ಗಂಗಾಧರ ಮುಳಿಗದ್ದೆ ಪ್ರಧಾನ ಕಾರ್ಯದರ್ಶಿ, ಪ್ರಶಾಂತ್ ತ್ಯಾಗರಾಜ ನಗರ, ಪದ್ಮನಾಭ ಗೌಡ ಮುಂಡಾಲ ಮುಂತಾದವರು ಉಪಸ್ಥಿತರಿದ್ದರು. ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಶರತ್ ಗೌಡ ಗುತ್ತುರವನ್ನು ಸುಭಾಸ್ ರೈಯವರು ಇದೇ ವೇಳೆ ಅಭಿನಂದಿಸಿದರು.

LEAVE A REPLY

Please enter your comment!
Please enter your name here