ಪುತ್ತೂರು : ಸಮರ್ಥ ಜನ ಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಇದರ ಆಶ್ರಯದಲ್ಲಿ ಮಕ್ಕಳಲ್ಲಿ ಸಂಸ್ಕಾರ ಮೂಡಿಸುವ ನಿಟ್ಟಿನಲ್ಲಿ ಎರಡು ದಿವಸ ಬಾಲಗೋಕುಲ ಶಿಬಿರವು ಅ. 18 ರಂದು ಪುಣ್ಚಪ್ಪಾಡಿಯ ಗೌರಿ ಸದನದಲ್ಲಿ ಆರಂಭಗೊಂಡಿತು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯರು ಶಿಬಿರ ಉದ್ಘಾಟಿಸಿ. ಮಾತನಾಡಿ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಪ್ರತಿನಿತ್ಯ ನಡೆಯಬೇಕು.ಆಗ ಮಾತ್ರ ಒಳ್ಳೆಯ ಸಮಾಜ ಮೂಡಿ ಬರಲು ಸಾಧ್ಯವಾಗಿದೆ ಎಂದರು.
ಮುಖ್ಯ ಅತಿಥಿ ಚಿತ್ರ ಕಲಾವಿದ, ಸವಣೂರು ಸಾಹಿತ್ಯ ವೇದಿಕೆ ಅಧ್ಯಕ್ಷ ನಾಗರಾಜ ನಿಡ್ವಣ್ಣಾಯ ಮಾತನಾಡಿ ಶಿಬಿರ ಮೂಲಕ ಮೌಲ್ಯಯುತ ಜ್ಞಾನದ ಅರಿವು ಮೂಡಲು ಸಾಧ್ಯವಿದೆ. ಪ್ರತಿ ಪೋಷಕರು ಇಂತಹ ಶಿಬಿರದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಬೇಕು ಎಂದರು.
ಅಧ್ಯಕ್ಷತೆಯನ್ನು ಸಮರ್ಥ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಿರಿಶಂಕರ ಸುಲಾಯ ವಹಿಸಿದರು. ಸವಣೂರು ಗ್ರಾಪ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಗ್ರಾ ಪಂ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ ,ವಿಶಾಲ ಓಂತಿಮನೆ ಉಪಸ್ಥಿತರಿದ್ದರು. ಸಮರ್ಥ ಜನ ಸೇವಾ ಟ್ರಸ್ಟ್ ನ ಕಾರ್ಯ ದರ್ಶಿ ಮಹೇಶ್ ಕೆ ಸವಣೂರು ವಂದಿಸಿದರು.
ಸಂಪನ್ಮೂಲ ವ್ಯಕಿಗಳಾಗಿ ಚಂದ್ರಶೇಖರ ಈಶ್ವರ ಮಂಗಲ, ಪ್ರಶಾಂತ ಉಡುಪಿ, ಕೃಷ್ಣಪ್ಪ ಬಂಬಿಲ, ಮಾನ್ವಿ ಜಿ ಎಸ್, ರಾಕೇಶ್ ಆಚಾರ್ಯ ಬೆಳಂದೂರು, ಮಹೇಶ್ ಕೆ ಸವಣೂರು, ಹೇಮಾಂತ್ ಕುದ್ಮಾರು ,ಗಿರಿಶಂಕರ ಸುಲಾಯ ಭಾಗವಹಿಸಿದರು.