ವಿಧಾನಪರಿಷತ್ ಉಪಚುನಾವಣೆ-ಕೌಕ್ರಾಡಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ಮತದಾನ

0

ನೆಲ್ಯಾಡಿ: ಸಂಸದರಾಗಿ ಚುನಾಯಿತರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್‌ನ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಕೌಕ್ರಾಡಿ ಗ್ರಾ.ಪಂ.ನ ಮತಗಟ್ಟೆಯಲ್ಲಿ ಬಿಜೆಪಿ ಬೆಂಬಲಿತ 11 ಸದಸ್ಯರ ಪೈಕಿ 10 ಮಂದಿ ಸದಸ್ಯರು ಜೊತೆಯಾಗಿ ಬಂದು ಮತದಾನ ಮಾಡಿದರು.


ಬಿಜೆಪಿ ಬೆಂಬಲಿತ ಸದಸ್ಯರು ಬಿಜೆಪಿ ಸುಳ್ಯ ಮಂಡಲದ ಉಪಾಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ ಅವರ ನೇತೃತ್ವದಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಬಿಜೆಪಿ ಬೆಂಬಲಿತ ಸದಸ್ಯರಾಗಿರುವ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಸುಧಾಕರ, ಉದಯಕುಮಾರ್, ಪುಷ್ಪಾ, ದೇವಕಿ, ಮಹೇಶ್, ಭವಾನಿ, ಜನಾರ್ದನ, ವಿಶ್ವನಾಥ ಅವರು ಜೊತೆಯಾಗಿ ಮತಗಟ್ಟೆಗೆ ಆಗಮಿಸಿ ಸರದಿ ಪ್ರಕಾರ ಒಬ್ಬೊಬ್ಬರಾಗಿ ಮತಚಲಾಯಿಸಿದರು.

LEAVE A REPLY

Please enter your comment!
Please enter your name here