ಅ.24: ಸೆಲ್ಕೋ ಸೋಲಾರ್‌ನ ಪುತ್ತೂರು ಶಾಖೆ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ಬೊಳುವಾರಿನ ಸೂರ್ಯಪ್ರಭ ಕಟ್ಟಡಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್‌ನ ಕಚೇರಿಯು ಅ.24ರಂದು ಉರ್ಲಾಂಡಿ ಸುಶ್ರುತ ಆಯುರ್ವೇದ ಆಸ್ಪತ್ರೆಯ ಮುಂಭಾಗದಲ್ಲಿರುವ ಭ್ರಮರಾಂಬಿಕ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.


ಬೆಂಗಳೂರಿನ ಜಿ.ಪಿ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಪುತ್ತೂರು ಸೇರಿದಂತೆ ಹಲವು ಕಡೆ ತನ್ನ ಶಾಖೆಗಳನ್ನು ಹೊಂದಿದೆ. ತನ್ನ ಸಂಸ್ಥೆಯ ಮೂಲಕ ಸೋಲಾರ್ ಡಿಸಿ ಲೈಟಿಂಗ್ ಸಿಸ್ಟಮ್, ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವ ಇ-ಶಾಲಾ ಸ್ಮಾರ್ಟ್ ಕ್ಲಾಸ್ ಸಿಸ್ಟಮ್, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಸಿಸ್ಟಮ್‌ಗಳು, ಸೋಲಾರ್ ವಾಟರ್ ಹೀಟರ್, ಸೋಲಾರ್ ಇನ್ವರ್ಟರ್, ಗ್ರಿಡ್ ಟೈಪ್ ಸಿಸ್ಟಮ್, ಸೋಲಾರ್ ಸ್ಟ್ರೀಟ್ ಲೈಟ್ ಸಿಸ್ಟಮ್, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಮೊದಲಾದ ಗುಣಮಟ್ಟದ ಸೇವೆಗಳನ್ನು ಕಳೆದ ಹಲವು ವರ್ಷಗಳಿಂದ ನೀಡುತ್ತಾ ಮನೆ ಮಾತಾಗಿದೆ.


ಸಂಸ್ಥೆಯನ್ನು ಪ್ರಗತಿಪರ ಕೃಷಿಕರು, ಹಿರಿಯ ಪತ್ರಕರ್ತರಾಗಿರುವ ಗೋಪಾಲಕೃಷ್ಣ ಕುಂಟಿನಿ ಉದ್ಘಾಟಿಸಲಿದ್ದಾರೆ. ವಾರಾಣಾಸಿ ಫಾರ್ಮ್ಸ್‌ನ ಕೃಷ್ಣಮೂರ್ತಿ, ಸಂತ ಫಿಲೋಮಿನಾ ಕಾಲೇಜಿನ ಪ್ರೊಫೇಸರ್ ಡಾ.ಎ.ಪಿ ರಾಧಾಕೃಷ್ಣ, ಸೆಲ್ಕೋ ಸೋಲಾರ್ ಸಂಸ್ಥೆಯ ಡಿಜಿಎಮ್ ಗುರುಪ್ರಕಾಶ್ ಶೆಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸೆಲ್ಕೋ ಸೋಲಾರ್‌ನ ಕ್ಷೇತ್ರ ವ್ಯವಸ್ಥಾಪಲ ಸಂಜೀತ್ ರೈ ಸೋಲಾರ್ ಜೀವಣೋಪಾಯ ಪರಿಕರ ಅಳವಡಿಸಿದ ಗ್ರಾಹಕರಿಗೆ ಅಭಿನಂದನಾ ಪತ್ರ ವಿತರಿಸಲಿದ್ದಾರೆ.


ಸೆಲ್ಕೋ ಸೋಲಾರ್ ಸಂಸ್ಥೆಯ ಪುತ್ತೂರು ಶಾಖೆಯ ಪ್ರಥಮ ಗ್ರಾಹಕಿ ಅನುಸೂಯ ರೈ, ಗ್ರಾಹಕ ವಾಸು ಪೂಜಾರಿ, ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ.ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here