ಪರ್ಪುಂಜದಲ್ಲಿ ಶ್ರೀ ದುರ್ಗಾ ಶಾಮಿಯಾನ, ಲೈಟಿಂಗ್ಸ್ ಶುಭಾರಂಭ

0

ಪುತ್ತೂರು: ಶ್ರೀ ದುರ್ಗಾ ಶಾಮಿಯಾನ ಮತ್ತು ಲೈಟಿಂಗ್ಸ್ ಸಂಸ್ಥೆ ಅ.23ರಂದು ಪರ್ಪುಂಜ ಬಿ.ಜೆ.ಎಂ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಸಂಸ್ಥೆಯನ್ನು ಕೃಷಿಕರಾದ ಮೋನಪ್ಪ ರೈಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪರ್ಪುಂಜ, ಸುರೇಶ್ ರೈ ಪರ್ಪುಂಜ, ಕಮಲಾ ರೈ ಮತ್ತಿತರರು ಉಪಸ್ಥಿತರಿದ್ದರು.


ಅತಿಥಿಗಳನ್ನು ಸ್ವಾಗತಿಸಿದ ಶ್ರೀ ದುರ್ಗಾ ಶಾಮಿಯಾನ, ಲೈಟಿಂಗ್ಸ್‌ನ ಮಾಲಕರಾದ ಅರುಣ್ ಕುಮಾರ್ ಗೋವಿಂದಮೂಲೆ ಮಾತನಾಡಿ ನಮ್ಮಲ್ಲಿ ಶಾಮಿಯಾನ, ಅಡುಗೆ ಪಾತ್ರೆಗಳು, ಲೈಟಿಂಗ್ಸ್, ಚಯರ್, ಟೇಬಲ್, ಜಿನ್ ಶೀಟ್ ಬಾಡಿಗೆಗೆ ದೊರೆಯುತ್ತದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here