ಕೆಯ್ಯೂರು: ಭಗವದ್ಗೀತಾ ಪಾರಾಯಣ ಉಚಿತ ಸೇವೆ,ಮಾತೃಪೂಜನಾ ಕಾರ್ಯಕ್ರಮ

0

ಪುತ್ತೂರು: ಶ್ರೀ ಸತ್ಯಸಾಯಿ ಕೌಶಲ್ಯಾಭಿವೃದ್ಧಿ ಕೇಂದ್ರ ಕೆಯ್ಯೂರು ಮತ್ತು ಗೀತಾ ಜ್ಞಾನಯಜ್ಞ ಘಟಕ ಬಾಳಿಲ ಇದರ ಆಶ್ರಯದಲ್ಲಿ 15 ದಿವಸದ ಭಗವದ್ಗೀತಾ ಪಾರಾಯಣ ತರಬೇತಿಯನ್ನು ಮತ್ತು ಸಂಸ್ಕೃತಿ ಸಂಸ್ಕಾರ ಗೀತಾಭ್ಯಾಸವನ್ನು ಮಾತಾಜಿ ತ್ರಿವೇಣಿ ವಿಶ್ವೇಶ್ವರ ಪುರೋಹಿತರು ಬಾಳಿಲ ಇವರು 15 ದಿವಸದ ಶಿಬಿರಾರ್ಥಿಗಳಿಗೆ ತರಬೇತಿ ಶಿಬಿರವನ್ನು ಕೆಯ್ಯೂರು ಯುವಕ ಮಂಡಲದ ಕಟ್ಟಡದಲ್ಲಿ ಉದ್ಘಾಟಿಸಿದರು. ಭಗವದ್ಗೀತಾ ಪಾರಾಯಣ ಹಾಗೂ ಮಾತೃಪೂಜನಾ ಕಾರ್ಯಕ್ರಮವನ್ನು ಮೌನೇಶ್ ಶರ್ಮರವರು ನೆರವೇರಿಸಿದರು. ಸುಮಾರು ೨೦ ಮಕ್ಕಳು ಮಾತೃಪೂಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀ ಸತ್ಯಸಾಯಿ ಸಮಿತಿಯ ಸಂಚಾಲಕ ದಯಾನಂದ, ಯುವಕ ಮಂಡಲದ ಉಸ್ತುವಾರಿ ಶ್ರೀಧರ ಪೂಜಾರಿ, ಗೀತಾಜ್ಞಾನ ಯಜ್ಞ ಘಟಕ ಬಾಳಿಲ ಇದರ ಸದಸ್ಯರು, ಜಿಲ್ಲಾ ಯುವ ಸಂಚಾಲಕಿ ವೀಶಾಲಾಕ್ಷಿ ಉಪಸ್ಥಿತರಿದ್ದರು. ಮೌನೇಶ್ ಶರ್ಮ ಹಾಗೂ ಭಗವದ್ಗೀತಾ ತರಬೇತಿ ನೀಡಿದ ಮಾತಾಜಿ ತ್ರಿವೇಣಿ ಬಾಳಿಲರವರನ್ನು ರವರಿಗೆ ಈ ಸಂದರ್ಭದಲ್ಲಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಾಳಿಲ ಗೀತಾಜ್ಞಾನ ತಂಡದ ಸದಸ್ಯೆ ಹರಿಣಾಕ್ಷಿ ಸ್ಮರಣಿಕೆ ಕೊಡುಗೆಯಾಗಿ ನೀಡಿದ್ದರು. ಅನ್ವಿತಾ ರೈ ಪ್ರಾರ್ಥಿಸಿದರು. ಶ್ರೀ ಸತ್ಯಸಾಯಿ ಕೌಶಲ್ಯಾಭಿವೃದ್ಧಿ ಕೇಂದ್ರದ ತರಬೇತುದಾರರಾದ ಮೀನಾಕ್ಷಿ ವಿ.ರೈ ಸ್ವಾಗತಿಸಿ, ರಶ್ಮಿತಾ ರೈ ವಂದಿಸಿದರು.

LEAVE A REPLY

Please enter your comment!
Please enter your name here