ನೆಲ್ಯಾಡಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕೌಕ್ರಾಡಿ ಹಾಗೂ ಇಚ್ಲಂಪಾಡಿ ಗ್ರಾಮಸ್ಥರಿಂದ ಅ.25ರಂದು ಕೌಕ್ರಾಡಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು ಮಾತನಾಡಿ, ಯೋಜನೆ ಜಾರಿಯಿಂದ ಕೃಷಿಕರಿಗೆ ಆಗುವ ಸಮಸ್ಯೆಯ ಕುರಿತು ಮಾಹಿತಿ ನೀಡಿ ಹೋರಾಟದ ರೂಪುರೇಷೆ ಬಗ್ಗೆ ತಿಳಿಸಿದರು. ಬಳಿಕ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಗ್ರಾ.ಪಂ.ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಧಾಕೃಷ್ಣ ಕೆರ್ನಡ್ಕ, ದಿನೇಶ್ ಕಲ್ಯ, ತನಿಯಪ್ಪ, ಜೋನಿಕುಟ್ಟಿ, ರೂಪೇಶ್‌ಕುಮಾರ್, ಉದಯಕುಮಾರ್ ಕೆ., ಜಾನ್ ಪಿ.ಜೆ., ಕೇಶವ ಗೌಡ ಅಲೆಕ್ಕಿ, ರಾಮಕೃಷ್ಣ ಕೆ., ಕೆ.ಎಸ್.ಮೋಹನ, ಜಯರಾಜ ಕೆ., ಲೋಕಯ್ಯ ಗೌಡ ಇಚ್ಲಂಪಾಡಿ, ಜಿನ್ನಪ್ಪ ಗೌಡ ಕೌಕ್ರಾಡಿ ವಿಜಯಬಾಲನ್ ಕೌಕ್ರಾಡಿ, ವಸಂತ ಬಿ., ರಮೇಶ್ ಕೆ., ಸಂತೋಷ್ ಪೂಜಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.