ಪುತ್ತೂರು : ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ( ರಿ) ಇದರ 2023- 24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ 2024-2025ನೇ ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಕುಲದೇವರಾದ ಬೋಳ್ನಾಡು ಶ್ರೀ ಭಗವತಿ ಕ್ಷೇತ್ರದಲ್ಲಿ ಹಾಗೂ ಸೀಮೆಯೊಡೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಸಂಘಟನೆ ಬಲವರ್ಧನೆಗೆ ಹಾಗೂ ಸಮಾಜ ಬಾಂಧವರ ಕ್ಷೇಮೋಭಿವೃದ್ಧಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷರಾದ ಕೆ.ಪಿ.ಸಂತೋಷ್ ಕುಮಾರ್, ಗೌರವಾಧ್ಯಕ್ಷರಾದ ಗೋಪಾಲಕೃಷ್ಣ, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಕೇಪುಲು ಹಾಗೂ ರಾಜೇಶ್ ಭೂಮಿ,ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮುಕ್ರಂಪಾಡಿ, ಸಂಘಟನಾ ಕಾರ್ಯದರ್ಶಿಗಳಾದ ಟಿ ರಾಜೀವ್, ರವೀಂದ್ರ,ದಯಾನಂದ ಮುರ, ರಾಘವ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ, ಸದಸ್ಯೆ ದಿವ್ಯಾ ಹಾಗೂ ಸಮಾಜದ ಕಿರಿಯ ಪುಟಾಣಿಗಳು ಹಾಜರಿದ್ದರು.