ಪುತ್ತೂರು: ಇಲ್ಲಿನ ಏಳ್ಮುಡಿ ಬಳಿಯ ಡೇನಿಯಲ್ ಆರ್ಕೆಡ್ ಇದರ ಮೊದಲ ಮಹಡಿಯಲ್ಲಿ ಕಳೆದ 5 ವರುಷಗಳಿಂದ ಕಾರ್ಯನಿರ್ವಹಿಸುತ್ತಿರುವ, ನಾಗೇಶ್ ನಾಯಕ್ ಇಂದಾಜೆ ಇವರ ಮಾಲೀಕತ್ವದ ನಮೃತಾ ಫೈನಾನ್ಸಿಯಲ್ ಕನ್ಸಲ್ವೆಂಟ್ ಸಂಸ್ಥೆಗೆ ಅ.21ರಂದು ಐದು ವರುಷಗಳು ಪೂರ್ಣಗೊಂಡು ಆರನೇಯ ವರುಷದ ಸಂಭ್ರಮಕ್ಕೆ ಕಾಲಿಟ್ಟಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಮತ್ತು ಹೆಚ್ ಡಿ ಎಫ್ ಸಿ ಮೂಲಕ ಮುದ್ರಾಲೋನ್ ವ್ಯವಸ್ಥೆಯನ್ನು ಜೊತೆಗೆ ಪ್ರಮುಖ ಖಾಸಗಿ ಹಣಕಾಸು ಸಂಸ್ಥೆಗಳಾದ ಐಸಿಐಸಿಐ, ಚೋಲ ಮಂಡಲಂ ಫೈನಾನ್ಸ್ ಸುಂದರಂ, ಪಿರಮಾಲ್, ಮಹೀಂದ್ರ, ಬಜಾಜ್ , ಟಾಟಾ ಕ್ಯಾಪಿಟಲ್ ಹಾಗೂ ಆದಿತ್ಯ ಬಿರ್ಲಾ ಮತ್ತು ಮುತ್ತೂಟ್ ಫೈನಾನ್ಸ್ ಈ ಮೊದಲಾದ ಸಂಸ್ಥೆಗಳ ಸಹಯೋಗದೊಡನೆ ವಾಣಿಜ್ಯ ಕಟ್ಟಡ, ಕೃಷಿ ಅಥವಾ ಖಾಲಿ ಭೂಮಿ ಖರೀದಿಗೆ, ಮನೆ ನಿರ್ಮಾಣ, ಖರೀದಿ ಅಥವಾ ದುರಸ್ತಿ ಕಾರ್ಯಗಳಿಗೆ ಸಾಲ ವ್ಯವಸ್ಥೆಗಳು, ಯಾವುದೇ ರೀತಿಯ ವ್ಯವಹಾರ, ವ್ಯಾಪಾರಗಳಿಗೆ ಮತ್ತು ವ್ಯಾಪಾರ ಅಭಿವೃದ್ಧಿಗೆ ಸಾಲ, ಅಡಮಾನ ಸಾಲ, ವಾಹನಗಳ ಖರೀದಿಗೆ ಹಾಗೂ ವೈಯಕ್ತಿಕ ಸಾಲ ಸೌಲಭ್ಯ ವ್ಯವಸ್ಥೆಗಳನ್ನೂ ಮೇಲಿನ ಹಣಕಾಸು ಸಂಸ್ಥೆ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಒದಗಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿ ಕಾರ್ಯ ಸೇವೆ ನಿರ್ವಹಿಸುತ್ತಿದ್ದು, ಪುತ್ತೂರು ಮಾತ್ರವಲ್ಲದೆ ಜಿಲ್ಲಾ ವ್ಯಾಪ್ತಿಯನ್ನೂ ಹೊಂದಿದೆ.
ಇಷ್ಟೇಯಲ್ಲದೇ ಯಾವುದೇ ರೀತಿಯ ಮನೆ, ಕೃಷಿ ಅಥವಾ ಕೃಷಿಯೇತರ ಜಾಗ, ಲಘು ಹಾಗೂ ಘನ ವಾಹನಗಳ ಮಾರಾಟ ಕಾರ್ಯ ಮತ್ತು ಚಿನ್ನಾಭರಣ ಸಾಲವನ್ನೂ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಐದು ವರುಷಗಳ ಪಯಣಕ್ಕೆ ಹಲವು ರೀತಿಯಿಂದ ಸಹಕಾರ ನೀಡಿ, ಪ್ರೋತ್ಸಾಹಿಸಿ, ಬೆಂಬಲ ನೀಡಿ, ಸಂಸ್ಥೆಯೊಂದಿಗೆ ಕೈ ಜೋಡಿಸಿದ ಎಲ್ಲ ಗ್ರಾಹಕ ಬಂಧುಗಳಿಗೂ ಮಾಲೀಕ ನಾಗೇಶ್ ನಾಯಕ್ ಇಂದಾಜೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಸಹಕಾರ ,ಬೆಂಬಲ ಕೋರಿದ್ದಾರೆ.
- 2 ರಾಷ್ಟ್ರೀಕೃತ ಹಾಗೂ 9 ಖಾಸಗಿ ಹಣಕಾಸು ಸಂಸ್ಥೆಗಳ ಸಹಯೋಗ ಹೊಂದಿರುವ ಸಂಸ್ಥೆ.ಕಟ್ಟಡ, ಮನೆ,ಭೂಮಿ,ವಾಹನ, ಅಡಮಾನ ಹಾಗೂ ವೈಯಕ್ತಿಕ ಸಾಲ ವ್ಯವಸ್ಥೆ ಕಲ್ಪಿಸುತ್ತಿರುವ ಸಂಸ್ಥೆ. ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಭಾಗಿ.
- ಮಾಹಿತಿಗಾಗಿ ದೂರವಾಣಿ ಸಂಖ್ಯೆ : 8197412282 ಅಥವಾ 8277118130 ಸಂಪರ್ಕಿಸಬಹುದು.