ಮೆಸ್ಕಾಂ ಕಂದಾಯ ವಸೂಲಾತಿ ವಿಶೇಷ ಅಭಿಯಾನ-ನಾಳೆ(ಅ.31)ರ ರಜಾದಿನದಲ್ಲಿ ನಗದು ಕೌಂಟರ್ ಕಾರ್ಯನಿರ್ವಹಣೆ

0

ಪುತ್ತೂರು: ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗದ ಕುಂಬ್ರ ವ್ಯಾಪ್ತಿಯಲ್ಲಿ ಸರಕಾರಿ ಸ್ಥಾವರಗಳು ಸೇರಿದಂತೆ ಸಂಪರ್ಕ ಪಡೆದಿರುವ ಎಲ್ಲಾ ಸ್ಥಾವರಗಳಿಂದ ಬೃಹತ್ ಮೊತ್ತದ ಕಂದಾಯ ಪಾವತಿಗೆ ಬಾಕಿ ಇದ್ದು, ಮೆಸ್ಕಾಂ ಅ.1ರಿಂದ ಅ.31 ರವರೆಗೆ ಕಂದಾಯ ವಸೂಲಾತಿಗೆ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅವಧಿಯಲ್ಲಿ ವಿದ್ಯುತ್ ಬಿಲ್ಲು ಪಾವತಿಸಲು ಬಾಕಿ ಇರುವ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅ.31ರ ರಜಾ ದಿನದಲ್ಲಿಯೂ ಬಿಲ್ ಪಾವತಿಗೆ ಕಚೇರಿ ಕಾರ್ಯನಿರ್ವಹಿಸಲಿದೆ.


ವಿದ್ಯುತ್ ಬಿಲ್ಲು ಪಾವತಿಸಲು ಬಾಕಿ ಇರುವ ಎಲ್ಲ ಗ್ರಾಹಕರು ಕೂಡಲೇ ಬಿಲ್ಲು ಪಾವತಿಸಿ ಮೆಸ್ಕಾಂ ಇಲಾಖೆಯೊಡನೆ ಸಹಕರಿಸಬೇಕು. ವಾಯಿದೆಯೊಳಗಾಗಿ ಬಿಲ್ಲು ಪಾವತಿಸದ ಸ್ಥಾವರಗಳ ವಿದ್ಯುತ್ ಸಂಪರ್ಕವನ್ನು ಅಭಿಯಾನದ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ತಿಂಗಳಾಂತ್ಯದ ರಜಾದಿನವಾದ ಅ.31ರಂದು ಕುಂಬ್ರ ಉಪವಿಭಾಗ ಕಚೇರಿಯಲ್ಲಿ ಬೆಳಿಗ್ಗೆ 10.00 ರಿಂದ ಮದ್ಯಾಹ್ನ 3.30 ಗಂಟೆಯವರೆಗೆ ನಗದು ಕೌಂಟರನ್ನು ತೆರೆದಿಡಲಾಗುವುದು. ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಂಡು ವಿದ್ಯುತ್ ಕಡಿತದಂತಹ ಕಠಿಣ ಕ್ರಮಗಳಿಗೆ ಅವಕಾಶ ನೀಡದೆ ಬಿಲ್ಲುಗಳನ್ನು ಪಾವತಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here