ಪುತ್ತೂರು: ಜೆಸಿಐ ಭಾರತ ವಲಯ 15ರ ವಲಯ ಸಮ್ಮೇಳನವು ಕಾಪು ಪ್ಯಾಲೇಸ್ ಗಾರ್ಡನ್ ರೆಸಾರ್ಟಿನಲ್ಲಿ ಅಕ್ಟೋಬರ್ 26 ಹಾಗೂ 27 ರಂದು ನಡೆಯಿತು.
ಜೇಸಿಐ ಆಲಂಕಾರಿನ ಅಧ್ಯಕ್ಷೆ ಜೇಸಿ ಮಮತಾ ಕಮಲಾಕ್ಷ ಶೆಟ್ಟಿ ಅಂಬರಾಜೆ ಇವರ ಅಧಿಕಾರ ಅವಧಿಯಲ್ಲಿ ಘಟಕದಲ್ಲಿ ನಡೆದ ಅನೇಕ ಕಾರ್ಯಕ್ರಮಗಳಿಗೆ ವಲಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಮನ್ನಣೆಗಳು ಜೆಸಿಐ ಆಲಂಕಾರಿಗೆ ದೊರಕಿರತ್ತದೆ.
ಮೌನ ಸಾಧಕರ ಗುರುತಿಸುವಿಕೆಗಾಗಿ ಸೆಲ್ಯೂಟ್ ದ ಸಿಲ್ವರ್ ಸ್ಟಾರ್ ಪ್ರೆಸಿಡೆಂಟ್ ಮನ್ನಣೆ, ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದಕ್ಕಾಗಿ ಡೈಮಂಡ್ ಜೆಸಿಐ ವೀಕ್ ಮನ್ನಣೆ ಹಾಗೂ ಔಟ್ ಸ್ಟ್ಯಾಂಡಿಂಗ್ ಜೆಸಿಐ Week Runner up ಅವಾರ್ಡ್, ರಕ್ತದಾನ ಶಿಬಿರದ ಆಯೋಜನೆಕ್ಕಾಗಿ ಸ್ಪೆಷಲ್ ರೆಕಾಗ್ನಿಷನ್ ಫಾರ್ ಬ್ಲಡ್ ಡೊನೇಷನ್ ಮನ್ನಣೆ, ಘಟಕದ ಹತ್ತು ಹಲವು ಕಾರ್ಯಕ್ರಮಗಳಿಗಾಗಿ Silver LOM Award ಹೀಗೆ ಹಲವಾರು ಪ್ರಶಸ್ತಿಗಳು ದೊರಕಿದೆ.
ಮಾತ್ರವಲ್ಲದೆ ವೈಯಕ್ತಿಕವಾಗಿ ವಲಯ ತರಬೇತಿ ವಿಭಾಗದ ನಿರ್ದೇಶಕಿಯಾದ ಜೆ ಸಿ ಹೇಮಲತಾ ಪ್ರದೀಪ್ ಇವರಿಗೆ ಅತ್ಯುತ್ತಮ ವಲಯ ನಿರ್ದೇಶಕರು Runner up Award, ಘಟಕದ ಕಾರ್ಯದರ್ಶಿಯಾದ ಕೃತಿಕಾ ಗುರುಕಿರಣ್ ಶೆಟ್ಟಿ ಇವರಿಗೆ Outstanding Local Organization Secretary of the Zone Winner Award ಹಾಗೂ ಜೂನಿಯರ್ ಜೇಸಿ ಅಧ್ಯಕ್ಷೆಯಾದ ಧನ್ಯಶ್ರೀ ಇವರಿಗೆ Whatsap Status Contest Winner Award ಪ್ರಶಸ್ತಿಗಳು ದೊರಕಿದೆ.
ಕಾರ್ಯಕ್ರಮದಲ್ಲಿ ಆಲಂಕಾರು ಜೇಸಿಐ ನ ಪೂರ್ವಾಧ್ಯಕ್ಷರುಗಳಾದ ಜೆಸಿ ಪ್ರದೀಪ್ ಬಾಕಿಲ, ಜೆಸಿ ಗುರುಕಿರಣ್ ಶೆಟ್ಟಿ ಬಾಲಾಜೆ, ಜೆಸಿ ಅಜಿತ್ ರೈ ಹಾಗೂ ಸದಸ್ಯರಾದ ಜೆಸಿ ವಿನಿತ್ ಶಗ್ರಿತ್ತಾಯ, 2025ರ ನಿಯೋಜಿತ ಅಧ್ಯಕ್ಷರಾದ ಜೆಸಿ ಗುರುರಾಜ್ ರೈ ಕೇವಳ ಮತ್ತಿತರರು ಉಪಸ್ಥಿತರಿದ್ದರು.