ಪುತ್ತೂರು: ಶ್ರೀ ಕ್ಷೇತ್ರ ಕಟೀಲಿನ ಕಟೀಲು ಪ್ರತಿಷ್ಠಾನ ವತಿಯಿಂದ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಭಜನ್ ಸ್ಪರ್ಧೆಯ ಎರಡು ವಿಭಾಗಗಳಲ್ಲಿ ಖ್ಯಾತ ಗಾಯಕ
ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾ ಕೇಂದ್ರದ 13 ವರ್ಷಕ್ಕಿಂತ ಕೆಳಗಿನ ವಿಭಾಗ ಮತ್ತು 18 ವರ್ಷದ ಕೆಳಗಿನ ವಿಭಾಗದ 2 ತಂಡಗಳು ಪ್ರಥಮ, ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈಗಾಗಲೇ ರಾಜ್ಯಮಟ್ಟ, ಜಿಲ್ಲಾ ಮಟ್ಟದ 50 ಕ್ಕೂ ಹೆಚ್ಚು ಭಜನ್ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿರುವ ಗಾನಸಿರಿ ತಂಡವು ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಕಿರಿಯರ ತಂಡದಲ್ಲಿ ಗಾನಸಿರಿ ವಿವಿಧ ಶಾಖೆಗಳ ವಿದ್ಯಾರ್ಥಿಗಳಾದ ಅಚಿಂತ್ಯ ಮಂಗಳೂರು, ಸನ್ಮಯ್ ಪುತ್ತೂರು, ಮನಸ್ವಿ ಆರ್ ವಿಟ್ಲ, ಮನಸ್ವಿ ಡಿ ಸುಳ್ಯ, ಶ್ರೀಯ ರಾಮಕುಂಜ, ರಿಷಿಕ ಕೊಡಿಪ್ಪಾಡಿ ಇವರನ್ನೊಳಗೊಂಡ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
18 ವರ್ಷ ಕೆಳಗಿನ ವಿಭಾಗದ ತಂಡದಲ್ಲಿ ಸೃಜನ ಉಪ್ಪಿನಂಗಡಿ, ಯಶಸ್ ಬಿ ಜೆ ಕುಂಬ್ರ, ಸಹನಾ ಉಪ್ಪಿನಂಗಡಿ, ಪಲ್ಲವಿ ಪುತ್ತೂರು, ಸಮೀಕ್ಷ ಪುತ್ತೂರು ಮತ್ತು ಲಿಖಿತ ಪುತ್ತೂರು ಇವರನ್ನೊಳಗೊಂಡ ತಂಡವು ದ್ವಿತೀಯ ಸ್ಥಾನ ಪಡೆದು ಬಹುಮಾನ ಪಡೆದುಕೊಂಡಿರುತ್ತದೆ. ಎರಡೂ ತಂಡಗಳಲ್ಲಿ ಹಾರ್ಮೋನಿಯಂ ಸಾಥಿಯಾಗಿ ದಿವ್ಯ ನಿಧಿ ರೈ ಎರುಂಬು ಮತ್ತು ತಬಲಾ ಸಾಥಿಯಾಗಿ ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ ಭಾಗವಹಿಸಿದ್ದರು. ಅತ್ಯುತ್ತಮ ಹಾರ್ಮೋನಿಯಂ ವಾದಕಿ ಪ್ರಶಸ್ತಿಯನ್ನು ಗಾನಸಿರಿಯ ದಿವ್ಯ ನಿಧಿ ರೈ ಪಡೆದುಕೊಂಡರು.