ಪುತ್ತೂರು: ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಆಶ್ರಯದಲ್ಲಿ ಎ.ಜೆ ಇನ್ಸ್ ಟ್ಯೂಷನ್ ಆಫ್ ಮೆಡಿಕಲ್ ಸಯನ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ನ.10ರಂದು ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡ ವಿತರಣೆ ನಡೆಯಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ನ 1 ರಂದು ಶ್ರೀ ರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು, ಗೌರವ ಸಲಹೆ ಗಾರರಾದ ಪ್ರಕಾಶ್ಚಂದ್ರ ರೈ ಕೈಕಾರ, ನಿತಿಶ್ ಶಾಂತಿವನ ಮತ್ತು ತಿಲಕ್ ರೈ ಕುತ್ಯಾಡಿ ಕಾರ್ಯಧ್ಯಕ್ಷ ಅಶೋಕ್ ತ್ಯಾಗರಾಜೆ, ಸಂಚಾಲಕ ಮಹೇಶ್ ರೈ ಕೇರಿ ಕಾರ್ಯ ಕಾರಿ ಸಮಿತಿ ಸದಸ್ಯರಾದ ಮಾಧವ ರೈ ಕುಂಬ್ರ, ಚಂದ್ರ ಕಾಂತ್ ಶಾಂತಿ ವನ,ಕರುಣ ರೈ ಬಿಜಳ, ಕೃಷ್ಣ ಕುಮಾರ್ ಇದ್ಯಾಪೆ,ಅರುಣ ರೈ ಬಿಜಳ, ಪದ್ಮನಾಭ ಗೌಡ ಮುಂಡಾಳ, ನಾರಾಯಣ ಪೂಜಾರಿ ಕುರಿಕ್ಕಾರ, ಮತ್ತು ರಾಜ್ ಪ್ರಕಾಶ್ ರೈ ಕುಂಬ್ರ ಮುಂತಾದವರು ಉಪಸ್ಥಿತರಿದ್ದರು.