ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ಸರೋಜಿನಿ ಶೆಟ್ಟಿಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ಪುತ್ತೂರು: ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ಪುತ್ತೂರು ತಾಲೂಕಿನ ಮೇನಾಲ ಮನೆ, ನೆಟ್ಟಣಿಗೆ ಮುಡ್ನೂರು ಗ್ರಾಮದ ಮೆನಾಲ ದಿ.ಜಲಧರ ಶೆಟ್ಟಿ ಮೇನಾಲರವರ ಪತ್ನಿ ಸರೋಜಿನಿ ಶೆಟ್ಟಿಯವರಿಗೆ ಈ ಭಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ತನ್ನ 20ನೇ ವಯಸ್ಸಿನಲ್ಲೇ ಒಬ್ಬಾಕೆ ಮಹಿಳೆಯಾಗಿ ನಿರಂತರ ಕೃಷಿಯಲ್ಲಿ ತೊಡಗಿಸಿಕೊಂಡು 7000ದಷ್ಟು ಅಡಿಕೆ ಗಿಡ(ಕಂಗು) ಅದರಷ್ಟೇ ಅಳತೆ ಪ್ರಮಾಣದ ತೆಂಗು ಸಹಿತ ಅದರೊಂದಿಗೆ ಮಿಶ್ರ ಕೃಷಿಗಳಾದ ಕರಿಮೆಣಸು, ಬಾಳೆಗಿಡ ಸೇರಿದಂತೆ ಅತ್ಯುತ್ತಮವಾದ ತೋಟ ನಿರ್ಮಿಸಿಕೊಂಡು ತಾವೇ ಸ್ವತಃ ಕೂಲಿಯಾಳುಗಳೊಂದಿಗೆ ಈ 65ನೇ ಇಳಿವಯಸ್ಸಿನಲ್ಲೂ ಗಂಡನ ಪಾಲಿನಿಂದ ಬಂದ 10 ಎಕ್ರೆ ಬರಡು ಭೂಮಿಯನ್ನು ಪೂರ್ಣ ಪ್ರಮಾಣದ ಕೃಷಿಯನ್ನಾಗಿಸಿ ಪರಿವರ್ತಿಸಿದ ಪರಿಸರ ಪ್ರೇಮಿ ಮಹಿಳೆಯಾಗಿದ್ದಾರೆ. ಅಲ್ಲದೆ ಕೃಷಿಯೊಂದಿಗೆ ಪೌಷ್ಟಿಕ ತೋಟ ನಿರ್ಮಿಸಿ ಹಲಸು,ಮಾವು,ಸಪೋಟ,ಮುಸಂಬಿ,ರಾಮ್ ಫಲ,ಸೀತಾಫಲ,ರಂಬೂಟನ್ ವಿವಿಧ ಬಗೆಯ ನೇರಳೆ, ಕಿತ್ತಳೆ, ಪೇರಳೆ,ಲಿಂಬೆ,ಪ್ಯಾಷನ್ ಹಣ್ಣು,ಮ್ಯಾಜಿಕ್,ಚಕೋತ,ಡ್ರಾಗನ್ ಪ್ರೂಟ್,ಚೆರಿ,ವಾಟರ್ ಅಪಲ್, ಸ್ಟಾರ್ ಆಪಲ್, ಜಂಬೂ ನೇರಳೆ, ಬಟರ್ ಪ್ರೂಟ್ ಅನನಾಸ್ ಹಾಗೂ ವಿದೇಶಿ ತಳಿಗಳ ಹಣ್ಣು ಹಂಪಲುಗಳು ಬೆಳೆಯುವುದರ ಮೂಲಕ ಕೃಷಿಯಲ್ಲಿ ಮಹೋನ್ನತ ಸಾದನೆ ಮಾಡಿರುತ್ತಾರೆ.
ಆದುನಿಕ ಕೃಷಿಗೆ ಅವಶ್ಯಕತೆಯಿರುವ ಕೊಳವೆ ಬಾವಿ,ಕಾಡು ಪ್ರಾಣಿಗಳಿಂದ ಕೃಷಿರಕ್ಷಣೆಗೆ ಸೋಲಾರ್ ಬೇಲಿ,ಹುಲ್ಲು ಕಡಿಕೆ ಯಂತ್ರ,ಮಳೆಗಾಲದಲ್ಲಿ ಅಡಕೆ ಒಣಗಿಸಲು ಸೋಲಾರ್ ಡೋಮ್,ಹನಿ ಮತ್ತು ತುಂತುರು ನೀರಾವರಿ, ಒವರ್ ಹೆಡ್ ನೀರಿನ ಟ್ಯಾಂಕ್, ಅಡಕೆಕೊಯ್ಯಲು ಮತ್ತು ಮದ್ದು ಸಿಂಪಡಣೆ ಯಂತ್ರ ಬಳಸಿ ಕೃಷಿಯಲ್ಲಿ ಅತ್ಯಧಿಕ ಆದಾಯ ಗಳಿಸಿ ಮಹಿಳಾ ರೈತೆಯಾಗಿ ಮಾದರಿಯಾಗಿದ್ದಾರೆ. ಅಲ್ಲದೆ ಕೃಷಿಯಲ್ಲಿ ಹೊಸತನವನ್ನು ಹುಡುಕುತ್ತಾ ಹುತೋಟ, ಆಲಂಕಾರಿಕ ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸವಾಗಿದೆ‌. ಇಂದು ಇವರ ಕೃಷಿ ಜಮೀನು ಆದರ್ಶವಾಗಿದ್ದು, ಪ್ರಾಕೃತಿಕ ಜಲಮೂಲವನ್ನು ಉಳಿಸಿಕೊಂಡು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಮೂಲಕ 25 ಕ್ಕೂ ಹೆಚ್ಚು ತಳಿಯ ಹಣ್ಣು ಹಂಪಲುಗಳನ್ನು ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಿರುವುದರ ಜೊತೆಗೆ ಪಕ್ಷಿ ಸಂಕುಲಕ್ಕೂ ಆಹಾರ ಒದಗಿಸುವ ಪುಣ್ಯಕಾರ್ಯವನ್ನು ಮಾಡಿರುತ್ತಾರೆ. ಇವರು ಕೃಷಿಯಲ್ಲಿ ಮಾಡಿದ ಸಾದನೆಗಾಗಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿದೆ. ಇವರು 10ನೇ ತರಗತಿಯವರಿಗೆ ಓದಿದ್ದು, ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೆನಾಲ ದಿ. ಜಲಧರ ಶೆಟ್ಟಿ ಮೇನಾಲರವರ ಪತ್ನಿಯಾಗಿದ್ದಾರೆ.

LEAVE A REPLY

Please enter your comment!
Please enter your name here