ಎಡನೀರು ಮಠದ ಸ್ವಾಮೀಜಿಯರ ವಾಹನಕ್ಕೆ ಅಡ್ಡಿ ಹಿನ್ನೆಲೆ-ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಭಕ್ತವೃಂದದಿಂದ ಖಂಡನೆ

0

ಪುತ್ತೂರು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಪಾದರ ವಾಹನಕ್ಕೆ ನ.3ರಂದು ಕಾಸರಗೋಡು ಬೊವಿಕ್ಕಾನದಲ್ಲಿ ಕಿಡಿಗೇಟಿಗಳು ಅಡ್ಡಿಪಡಿಸಿ ಹಾನಿ ಮಾಡಿರುವುದನ್ನು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಭಕ್ತವೃಂದ ಖಂಡಿಸಿದ್ದಾರೆ.


ಎಡನೀರು ಮಠದ ಸ್ವಾಮೀಜಿಗಳು ನಮಗೆಲ್ಲ ಮಾರ್ಗದರ್ಶಕರು, ನಮ್ಮ ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಿಗೆ ಅವರ ಮಾರ್ಗದರ್ಶನದ ಮೂಲಕವೇ ನಾವು ಮುನ್ನಡೆಯುತ್ತಿದ್ದೇವೆ. ಕೆಮ್ಮಾಯಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಸ್ವಾಮೀಜಿಯವರು ಚಾತುರ್ಮಾಸ ವೃತವನ್ನು ಕೂಡ ನಡೆಸಿದ್ದಾರೆ. ಮಹಾವಿಷ್ಣು ದೇವಸ್ಥಾನದ ಭಕ್ತರಾಗಿರುವ ನಮಗೆಲ್ಲ ಮಾರ್ಗದರ್ಶರಾಗಿರುವಂತ ಶ್ರೀಗಳ ಈ ಒಂದು ಹಿಂದೂ ಧರ್ಮದ ಕಾರ್ಯಗಳಿಗೆ ಕಿಡಿಗೇಡಿಗಳು ಅಡ್ಡಿಯನ್ನು ಉಂಟುಮಾಡುವಂತದ್ದು ಅತ್ಯಂತ ಖಂಡನೀಯವಾಗಿದೆ. ಕೇರಳದ ಗಡಿ ಭಾಗದಲ್ಲಿರುವಂತ ಎಡನೀರು ಮಠ ಅತ್ಯಂತ ಪವಿತ್ರವಾದ ಮತ್ತು ಪ್ರಾಚೀನ ಪರಂಪರೆ ಹೊಂದಿರುವ ಮಠ, ಈ ಮಠದ ಸ್ವಾಮೀಜಿಗಳಿಗೆ ರಕ್ಷಣೆ ಕೊಡುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವರ ಭಕ್ತರು ಇಲ್ಲಿಯ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಸೇರಿದ ಭಕ್ತರು ಖಂಡನಾ ನಿರ್ಣಯ ಕೈಗೊಂಡಿದ್ದಾರೆ ಎಂದು ನಾಗೇಶ್ ಟಿ.ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here