ಗೋಸೇವೆಯಿಂದ ಜನ್ಮ ಜನ್ಮಾಂತರದ ಪಾಪ ನಾಶ- ಪ್ರಾಂತ ಸಂಚಾಲಕ ರವೀಶ್
ಆಲಂಕಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವು ಕೊಯಿಲದಲ್ಲಿ ಉಪ್ಪಿನಂಗಡಿಯ ಎಲ್ಲಾ ಯೋಗ ಶಾಖೆಗಳ ವತಿಯಿಂದ ಸಾಮೂಹಿಕ ಗೋಪೂಜೆ ಮತ್ತು ಗೋಗ್ರಾಸ ಕಾರ್ಯಕ್ರಮ ನ.3 ರಂದು ನಡೆಯಿತು.
ಕೊಯಿಲ ಶಾಖೆಯ ಯೋಗಬಂಧುಗಳಿಂದ ಚೆಂಡೆ ವಾದನ ನಡೆದ ಬಳಿಕ ಯೋಗ ಬಂಧುಗಳಿಂದ ಭಜನೆ ನಂತರ ಗೋವುಗಳ ಸ್ವಚ್ಛತೆ ನಡೆಯಿತು. ಕೊಯಿಲ ಶಾಖೆಯ ಯೋಗ ಶಿಕ್ಷಕ ಚೇತನ್ ಬೌದ್ದಿಕ್ ನೀಡಿದರು. ಸಮಿತಿಯ ಪ್ರಾಂತ ಸಂಚಾಲಕ, ಸೇವಾ ವಿಭಾಗದ ರವೀಶ್ ಶ್ರೀ ಪತಂಜಲಿ ಯೋಗ ಶಿಕ್ಷಣದ ಬಗ್ಗೆ ತಿಳಿಸಿ ಎಲ್ಲಾ ರೋಗಗಳಿಗೆ ಮೂಲ ಕಾರಣ ಮನಸ್ಸು .ಮನಸ್ಸನ್ನು ಹತೋಟಿಯಲ್ಲಿ ಇಡುವುದೇ ಯೋಗ.ಗೋವಿನಲ್ಲಿ ದೇವಾನು ದೇವತೆಗಳು ವಾಸವಾಗಿರುವ ಕಾರಣ, ಗೋ ಸೇವೆಯಿಂದ ಜನ್ಮ ಜನ್ಮಗಳಲ್ಲಿ ಮಾಡಿದ ಪಾಪ ನಾಶವಾಗುತ್ತದೆ ಎಂದು ತಿಳಿಸಿ ನಾವೆಲ್ಲರೂ ನಿತ್ಯ ಯೋಗಭ್ಯಾಸದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಸಾಮೂಹಿಕ ಗೋಪೂಜೆ ಹಾಗೂ ಪ್ರಸಾದ ಸೇವನೆ ನಡೆಸಲಾಯಿತು. ಮಹಾಮಂಗಳಾರತಿಯ ಬಳಿಕ ಪ್ರಸಾದ ವಿತರಣೆ ನಡೆಯಿತು.ಮಂಗಳೂರು, ಉಪ್ಪಿನಂಗಡಿ, ಕೊಯಿಲ, ಆಲಂಕಾರು, ನೆಲ್ಯಾಡಿ ಹಾಗೂ ಗುರುವಾಯನಕೆರೆಯ ಯೋಗ ಹಾಗೂ ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.