ಹಿರೇಬಂಡಾಡಿ: ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷದ ಅವಧಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.
13 ಸದಸ್ಯ ಬಲದ ಸಂಘದ 9 ಸಾಮಾನ್ಯ ಸ್ಥಾನಕ್ಕೆ ಉಮಾವತಿಶೀನಪ್ಪ ಗೌಡ ವಳಕಡಮ, ಕವಿತಾಮೋಹನ್ದಾಸ್ ಗೌಡ ಬೊಳ್ಳುಕಲ್ಲು, ಕುಸುಮಾವತಿ ಧನಂಜಯ ಗೌಡ ದರ್ಖಾಸು ವಳಕಡಮ, ದಮಯಂತಿ ಕರುಣಾಕರ ಗೌಡ ಕೊನೆಮಜಲು, ಪದ್ಮಾವತಿ ಸಂಜೀವ ಗೌಡ ಕೊನೆಮಜಲು, ವನಜಾಕ್ಷಿಶೇಖರ ಗೌಡ ಊರಾಜೆ ವಳಕಡಮ, ವಿಜಯಾಜಯರಾಮ ಗೌಡ ನಡುಮನೆ ವಳಕಡಮ, ಶ್ವೇತಾಹರಿಶ್ಚಂದ್ರ ಗೌಡ ಮಾಳ, ಸವಿತ ದಯಾನಂದ ಗೌಡ ಶ್ರೀನಿಲಯ ವಳಕಡಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಜಾತಿ 1 ಮೀಸಲು ಸ್ಥಾನಕ್ಕೆ ಪುಟ್ಟಮ್ಮಕೊರಗು ಮುಗೇರ ಕೆಮ್ಮಟೆ ವಳಕಡಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿರುವ 1 ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳು ಇಲ್ಲದೇ ಇರುವುದರಿಂದ ಖಾಲಿಯಾಗಿದೆ. ಹಿಂದುಳಿದ ಪ್ರವರ್ಗ ಎ ಮೀಸಲು 1 ಸ್ಥಾನ ಹಾಗೂ ಹಿಂದುಳಿದ ಪ್ರವರ್ಗ ಬಿ ಮೀಸಲು 1 ಸ್ಥಾನಕ್ಕೆ ನಾಮಪತ್ರ ಸ್ವೀಕೃತಗೊಳ್ಳದೇ ಇರುವುದರಿಂದ ಆ ಸ್ಥಾನವು ಖಾಲಿಯಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಪುತ್ತೂರು ಉಪವಿಭಾಗ ಇಲ್ಲಿನ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಅವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಸಹಕರಿಸಿದರು.