ಪುತ್ತೂರು: ಜಿಡ್ಡು ಕಟ್ಟಿದ ಮನಸ್ಸಿಗೆ ಮುದ ನೀಡುವ ಪುತ್ತೂರು ಉತ್ಸವ 2024ರ ಸರ್ವಸಿದ್ದತೆಗಳು ಪೂರ್ಣಗೊಂಡಿದ್ದು, ನ.8 ರಂದು ಉದ್ಘಾಟನೆಗೊಳ್ಳಲಿದೆ.
ನಗರದ ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ಇಂಡಿಯನ್ ಅಮ್ಯೂಸ್ಮೆಂಟ್ ಆಶ್ರಯದಲ್ಲಿ ನಡೆಯಲಿರುವ ಈ ಉತ್ಸವಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನ.8 ರಂದು ಸಂಜೆ 5.30 ಕ್ಕೆ ಚಾಲನೆ ನೀಡಲಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೋಹಾಪಾತ್ರ, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಬಾಲಚಂದ್ರ ಕೆ, ಆಯುಕ್ತ ಮಧು ಎಸ್ ಮನೋಹರ್, ಪುತ್ತೂರು ತಹಶೀಲ್ಧಾರ್ ಪುರಂದರ್, ಪುತ್ತೂರು ನಗರ ಪೊಲೀಸ್ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜಾ, ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್ ವೈದ್ಯೆ ಡಾ. ಹಬೀನಾ ಶೈರಾ, ನಗರ ಸಭಾ ಸದಸ್ಯ ಯೂಸುಫ್ ಡ್ರೀಮ್ಸ್, ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನ.8 ರಿಂದ ಮುಂದಿನ 45 ದಿನಗಳ ಕಾಲ ನಡೆಯಲಿರುವ ಪುತ್ತೂರು ಉತ್ಸವದಲ್ಲಿ ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 10 ರವರೆಗೆ ವಸ್ತು ಪ್ರದರ್ಶನ, ಅಮ್ಯೂಸ್ಮೆಂಟ್ ಪಾರ್ಕ್, ಫ್ಯಾಮಿಲಿ ಗೇಮ್ಸ್, ಫುಡ್ ಫೆಸ್ಟ್ ಇರಲಿದೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಡಾನ್ಸಿಂಗ್ ಫ್ಲೈ ಪುತ್ತೂರು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಬ್ರೇಕ್ ಡಾನ್ಸ್, ಜೈಂಟ್ ವ್ಹೀಲ್, ಕೊಲಂಬಸ್, ಡ್ರ್ಯಾಗನ್ ಡ್ರೈವ್, ಮಿಕ್ಕಿಮೌಸ್, ವಾಟರ್ ಬೋಟ್ ಸೇರಿದಂತೆ 15ಕ್ಕಿಂತಲೂ ಹೆಚ್ಚು ಆಟೋಪಕರಣ ಉತ್ಸವದಲ್ಲಿದೆ. ಇದಲ್ಲದೆ ವಸ್ತು ಪ್ರದರ್ಶನದಲ್ಲಿ ಫುಡ್ ಕೋರ್ಟ್ ಅಂಗಡಿ ಮಳಿಗೆಗಳು, ಫ್ಯಾಮಿಲಿ ಗೇಮ್ಸ್ನಂತಹ ವಿವಿಧ ಮನರಂಜನಾ ಕಾರ್ಯಕ್ರಮ ನಿಮ್ಮನ್ನು ರಂಜಿಸಲಿದೆ.
ಸೆಲ್ಪಿ ಪಾಯಿಂಟ್, ಲಂಡನ್ ಬ್ರಿಡ್ಜ್, ಮಲೇಶಿಯಾದ ಟ್ವಿನ್ ಟವರ್, ದುಬಾಯ ಬುರ್ಚ್ ಅಲ್ ಅರಬ್ ಪ್ರತಿಕೃತಿಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸಲಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಧೆ ಇದ್ದು, ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಭೇಟಿ ನೀಡುವ ಮೂಲಕ ಪುತ್ತೂರು ಉತ್ಸವದಲ್ಲಿ ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8880888221 , 8880888321 ಮತ್ತು 9448787974 ಮೊಬೈಲ್ ಸಂಖ್ಯೆಯನ್ನ ಸಂಪರ್ಕಿಸಬಹುದಾಗಿದೆ.