ಗಲ್ಫ್ ಟೂರ್ಸ್ & ಟ್ರಾವೆಲ್ಸ್ ನಿಂದ 2025ನೇ ಸಾಲಿನ ಹಜ್ ಯಾತ್ರೆಗೆ ಯಾತ್ರಾರ್ಥಿಗಳಿಂದ ಪಾಸ್ ಪೋರ್ಟ್ ಸ್ವೀಕಾರಕ್ಕೆ ಪುತ್ತೂರು ತಂಙಳ್ ರಿಂದ ಚಾಲನೆ

0

ಇಪ್ಪತ್ತರಷ್ಟು ಮಂದಿ ಖಾಸಗಿ ಹಜ್ ಯಾತ್ರೆಗೆ ನೋಂದಣಿ
ನವೆಂಬರ್ ತಿಂಗಳ ಉಮ್ರಾ ಯಾತ್ರೆಯ ಎರಡು ಬ್ಯಾಚುಗಳಿಗೆ ತರಬೇತಿ ಶಿಬಿರ

ಪುತ್ತೂರು: ಪ್ರತಿಷ್ಠಿತ ಹಜ್ ಉಮ್ರಾ ಟ್ರಾವೆಲ್ ಏಜೆನ್ಸಿ ಸಂಸ್ಥೆಯಾದ ಗಲ್ಫ್ ಟೂರ್ಸ್ ಆಂಡ್ ಟ್ರಾವೆಲ್ಸ್ ಆಶ್ರಯದಲ್ಲಿ 2025 ನೇ ಸಾಲಿನ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಂದ ಪಾಸ್ಪೋರ್ಟ್ ಸ್ವೀಕಾರ ಸಮಾರಂಭವು ನಗರದ ಬದ್ರಿಯಾ ಮಸೀದಿಯ ಮದರಸ ಹಾಲಿನಲ್ಲಿ ನಡೆಯಿತು.

ಪುತ್ತೂರಿನ ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ರವರು ಯಾತ್ರಾರ್ಥಿಗಳಿಂದ ಪಾಸ್ಪೋರ್ಟ್ ಸ್ವೀಕರಿಸಿ ಹಜ್ ಬುಕಿಂಗ್ ಗೆ ಚಾಲನೆ ನೀಡಿದರು. ಪ್ರಥಮವಾಗಿ ಉಪ್ಪಿನಂಗಡಿ ಕುದ್ಲೂರಿನ ಕೂಡ್ಲೆ ಇಬ್ರಾಹಿಂ ದಂಪತಿಗಳು ಮತ್ತು ಅಬ್ದುಲ್ಲ ರೆಂಜ ಕುಟುಂಬಸ್ಥರು ಪಾಸ್ ಪೋರ್ಟ್ ಗಳನ್ನು ನೀಡಿ ಯಾತ್ರೆಯನ್ನು ಕಾಯ್ದಿರಿಸಿದರು. ಅನ್ಸಾರುದ್ದೀನ್ ಜಮಾಅತ್ ಸಮಿತಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹ್ಮಾನ್ ಆಝಾದ್ ಅಧ್ಯಕ್ಷತೆ ವಹಿಸಿದರು.

ಬದ್ರಿಯಾ ಮಸೀದಿ ಖತೀಬರಾದ ಅಬ್ಬಾಸ್ ಮದನಿ ಝಿಯಾರತ್ ನೇತ್ರತ್ವ ವಹಿಸಿದರು. ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ರೆಂಜಲಾಡಿ ಶಕೂರು ಹಾಜಿ ಶುಭ ಹಾರೈಸಿ ಮಾತನಾಡಿದರು. ಸಮಾರಂಭದಲ್ಲಿ ಯಾಕೂಬ್ ದಾರಿಮಿ, ರಫೀಕ್ ಫೈಝಿ ಮಾಡನ್ನೂರು,ಪುತ್ತು ಹಾಜಿ ಚಾಪಲ್ಲ, ಸಿಟಿ ಬಝಾರ್ ಹಸನ್ ಹಾಜಿ, ಹಾಜಿ ಕುಂಞಾಲಿಚ್ಚ ಸಾಲ್ಮರ,ಇಸ್ಮಾಯಿಲ್ ಉಜ್ರುಪಾದೆ, ಅಬೂಬಕ್ಕರ್ ಹಾಜಿ ಕೊಲ್ಚಪ್ಪು, ಆದಂ ಕುಂಞಿ ಅಜಿಲಮೊಗರು ಮೊದಲಾದವರು ಉಪಸ್ಥಿತರಿದ್ದರು.


ಉಮ್ರಾ ತರಬೇತಿ ಶಿಬಿರ:
ನವಂಬರ್ ತಿಂಗಳ ಉಮ್ರಾ ಯಾತ್ರಾರ್ಥಿಗಳ ಎರಡು ತಂಡಗಳಿಗೆ ಚೀಫ್ ಅಮೀರ್ ಉಸ್ತಾದ್ ಸಿರಾಜುದ್ದೀನ್ ಫೈಝಿ ಪ್ರಾಯೋಗಿಕ ತರಬೇತಿ ನೀಡಿದರು. ನವಂಬರ್ 14ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡು ತಂಡಗಳಲ್ಲಾಗಿ ಯಾತ್ರಾರ್ಥಿಗಳು ಹೊರಡಲಿದ್ದು, ಚೀಫ್ ಅಮೀರ್ ಸಿರಾಜುದ್ದೀನ್ ಫೈಝಿ ಮಾರ್ಗದರ್ಶನ ನೀಡಲಿದ್ದಾರೆ. ಯಾತ್ರಾರ್ಥಿ ಮಹಿಳೆಯರಿಗೆ ಮಹಿಳಾ ಅಮೀರ್ ರ ಸೇವೆಯೂ ಲಭ್ಯವಾಗಲಿದೆ.


2025ರ ಹಜ್ ಯಾತ್ರೆಗೆ ಬುಕಿಂಗ್ ಮುಂದುವರಿಕೆ
ಐವತ್ತು ಮಂದಿಯ ತಂಡವನ್ನೊಳಗೊಂಡ 2025ರ ಹಜ್ ಯಾತ್ರೆಗೆ ಬುಕಿಂಗ್ ಮುಂದುವರಿಯುತ್ತಿದ್ದು ಆಸಕ್ತರು ಕೂಡಲೇ ಸಂಪರ್ಕಿಸಿ ಸೀಟು ಕಾಯ್ದಿರಿಸಿಕೊಳ್ಳುವಂತೆ ಸಂಸ್ಥೆಯ ಸುಲೈಮಾನ್ ಹಾಜಿ ವಿನಂತಿಸಿದ್ದಾರೆ. ಈಗಾಗಲೇ ಇಪ್ಪತ್ಕಕ್ಕಿಂತಲೂ ಅಧಿಕ ಮಂದಿ ಪಾಸ್ಪೋರ್ಟ್ ನೀಡಿದ್ದಾರೆ. ಅಮೀರ್ ಸಿರಾಜುದ್ದೀನ್ ಫೈಝಿ ಸ್ವಾಗತಿಸಿ ವಂದಿಸಿದರು. ಸಿಬ್ಬಂಧಿಗಳಾದ ನಸೀಮ್, ಹಾಫಿಲ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here