ಉಪ್ಪಿನಂಗಡಿ ಸೈಂಟ್ ಮೇರೀಸ್ ಶಾಲೆಯಲ್ಲಿ ಉಪ್ಪಿನಂಗಡಿ ವಲಯದ ಪ್ರೌಢಶಾಲಾ ವಿಭಾಗ – ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ‘ಪ್ರತಿಭೋತ್ಕರ್ಷ’

0

ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ-ಲೋಕೇಶ್ ಎಸ್.ಆರ್

ಪುತ್ತೂರು: ಎಲ್ಲಾ ಮಕ್ಕಳು ಪ್ರತಿಭಾವಂತರೇ. ಆದರೆ ಆ ಪ್ರತಿಭೆಯ ಅನಾವರಣವಾಗಬೇಕಿದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ವೇದಿಕೆ ನಿರ್ಮಿಸಲು ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿ ಮೂಲಕ ಪ್ರತಿ ವರ್ಷ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ವಲಯ ಮಟ್ಟದಿಂದ ತಾಲೂಕು, ಜಿಲ್ಲಾ ಮಟ್ಟಕ್ಕೆ ಹೋಗುವಂತಾಗಲಿ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹೇಳಿದರು.


ನ.೭ ರಂದು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಉಪ್ಪಿನಂಗಡಿ ಹಾಗೂ ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ಉಪ್ಪಿನಂಗಡಿ ವಲಯದ ಪ್ರೌಢಶಾಲಾ ವಿಭಾಗದ ಹಾಗೂ ಉಪ್ಪಿನಂಗಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ‘ಪ್ರತಿಭೋತ್ಕರ್ಷ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತಾರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಮಕ್ಕಳ ಪ್ರತಿಭೆಯನ್ನು ಪೋಷಿಸಿ, ಪ್ರಜ್ವಲಿಸುವುದು ನಮ್ಮ ಕರ್ತವ್ಯ-ವಂ|ಜೆರಾಲ್ಡ್ ಡಿ’ಸೋಜ:
ಅಧ್ಯಕ್ಷತೆಯನ್ನು ವಹಿಸಿದ ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವಂ|ಜೆರಾಲ್ಡ್ ಡಿ’ಸೋಜರವರು ಮಾತನಾಡಿ, ಪ್ರತಿ ಮಕ್ಕಳು ಪ್ರತಿಭಾವಂತರು. ಆದರೆ ಆ ಮಕ್ಕಳ ಪ್ರತಿಭೆಯನ್ನು ಪೋಷಿಸಿ, ಬೆಳೆಸಿ, ಪ್ರಜ್ವಲಿಸುವಂತೆ ಮಾಡುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸುಕದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ವೇದಿಕೆಯಾಗಿದೆ ಎಂದರು.


ಮಗುವಿನ ಪ್ರತಿಭೆಯು ಗುರಿ ಮುಟ್ಟವಲ್ಲಿ ಪ್ರೋತ್ಸಾಹವಿರಲಿ-ಹರಿಪ್ರಸಾದ್ ಎಂ:
ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಎಂ ಮಾತನಾಡಿ, ಇಲಾಖೆಯ ಯಾವುದೇ ಕಾರ್ಯಕ್ರಮವಿರಲಿ, ಉಪ್ಪಿನಂಗಡಿ ಸೈಂಟ್ ಮೇರೀಸ್ ಶಾಲೆಯು ತಕ್ಷಣ ಸ್ಪಂದಿಸುತ್ತಿದ್ದಾರೆ. ಮಗುವಿನ ಪ್ರತಿಭೆ ಗೆಲುವಿನ ತನಕ ಹೋಗಬೇಕು ಎನ್ನುವುದು ಪ್ರತಿ ಮಗುವಿನ ಹೆಬ್ಬಯಕೆಯಾಗಿದೆ. ಮಗುವಿನ ಪ್ರತಿಭೆಯು ಗುರಿ ಮುಟ್ಟವಲ್ಲಿ ನಮ್ಮ ಪ್ರೋತ್ಸಾಹವಿರಲಿ. ವಿದ್ಯಾರ್ಥಿಗಳು ನ್ಯಾಯಯುತವಾಗಿ, ಸತ್ಯಯುತವಾಗಿ, ಶುದ್ಧತೆಯಿಂದ ಸ್ಪರ್ಧೆಯಲ್ಲಿನ ಗುರಿಯನ್ನು ಮುಟ್ಟುವಲ್ಲಿ ಶ್ರಮಿಸಬೇಕು ಎಂದರು.


ಭಾಗವಹಿಸಿದ ಪ್ರೌಢಶಾಲೆಗಳು:
ಈ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಕೊಣಾಲು ಸರಕಾರಿ ಪದವಿ ಪೂರ್ವ ಕಾಲೇಜು, ನೆಲ್ಯಾಡಿ ಪಿ.ಎಂ ಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕಾಂಚನ ವೆಂಕಟಸುಬ್ರಹ್ಮಣ್ಯ ಶಾಲೆ, ನೆಲ್ಯಾಡಿ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಶಾಲೆ, ಶಾಂತಿನಗರ ಸರಕಾರಿ ಪ್ರೌಢಶಾಲೆ, ನೆಲ್ಯಾಡಿ ಮೌಂಟನ್ ವ್ಯೂ ಪ್ರೌಢಶಾಲೆ, ನೆಲ್ಯಾಡಿ ಶ್ರೀರಾಮ ಪ್ರೌಢಶಾಲೆ, ಪೆರಿಯಡ್ಕ ಸರ್ವೋದಯ ಪ್ರೌಢಶಾಲೆ, ಪಡುಬೆಟ್ಟು ಸರಕಾರಿ ಪ್ರೌಢಶಾಲೆ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿ ಸೈಂಟ್ ಮೇರೀಸ್ ಪ್ರೌಢಶಾಲೆ, ಉಪ್ಪಿನಂಗಡಿ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ, ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆ, ವಳಾಲು ಸರಕಾರಿ ಪ್ರೌಢಶಾಲೆ, ಸಾಲ್ಮರ ಸರಕಾರಿ ಪ್ರೌಢಶಾಲೆ, ಗೋಳಿತೊಟ್ಟು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ, ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರ, ಉದನೆ ಬಿಷಪ್ ಪೋಲಿಕಾರ್ಪಸ್ ಪಬ್ಲಿಕ್ ಸ್ಕೂಲ್, ಶಿರಾಡಿ ಸೈಂಟ್ ಅಂತೋನೀಸ್ ಪ್ರೌಢಶಾಲೆ ಹೀಗೆ 23 ಪ್ರೌಢಶಾಲೆಗಳು ಭಾಗವಹಿಸಿತ್ತು.


ಹಿರಿ-ಕಿರಿಯ ವಿಭಾಗ:
ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಕೆಮ್ಮಾರ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಅಡೆಕ್ಕಲ್ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಹಿರೇಬಂಡಾಡಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಂಗಡಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಂಗಡಿ ಮಠ ದ.ಕ.ಜಿ.ಪಂ ಹಿರಿಯ ಪ್ರಾ.ಶಾಲೆ, ಸೈಂಟ್ ಫಿಲೋಮಿನಾ ಹಿ.ಪ್ರಾ ಶಾಲೆ ಉಪ್ಪಿನಂಗಡಿ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರ ಪ್ರೌಢಶಾಲೆ, ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ, ನಟ್ಟಿಬೈಲು ಶ್ರೀ ರಾಮ ವೇದಶಂಕರ ಶಾಲೆ, ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಭಾಗವಹಿಸಿತ್ತು.


ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎ.ವಿ ಚಕ್ರಪಾಣಿ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊ, ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀಧರ್ ಮಠಂದೂರು, ಪುತ್ತೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ, ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ, ಶಿಕ್ಷಣ ಇಲಾಖೆಯ ಬಿ.ಐ.ಇ.ಆರ್.ಟಿ ತನುಜಾ ಝೇವಿಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪ್ಪಿನಂಗಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಅಶ್ರಫ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹಶಿಕ್ಷಕರಾದ ಪವಿತ್ರಾ, ಶ್ರೇಯಸ್, ಸತೀಶ್, ಪವಿತ್ರಾ ಕಾರ್ಲೋ, ಸಂತ ಫಿಲೋಮಿನಾ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಫಿಲೋಮಿನಾ ಪಾಯಿಸ್, ಸಿಸ್ಟರ್ ಗ್ರೇಸಿ, ಶಶಿಧರ್, ವಾಸಪ್ಪ, ಶ್ವೇತಾರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂ ನೀಡಿ ಸ್ವಾಗತಿಸಲಾಯಿತು. ಜಿಲ್ಲಾ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಸಹ ಶಿಕ್ಷಕಿ ಜಾಸ್ಮಿನ್‌ರವರು ನೀಡಿದರು. ಸಂತ ಮೇರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಮೀರಾ ಮರ್ಲಿನ್ ರೊಡ್ರಿಗಸ್ ವಂದಿಸಿದರು. 18 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ಜರಗಿದ್ದು, ತೀರ್ಪುಗಾರರು, ಶಾಲಾ ಶಿಕ್ಷಕ-ಆಡಳಿತ ಸಿಬ್ಬಂದಿ ವೃಂದ ಸಹಕರಿಸಿದರು. ಸಹ ಶಿಕ್ಷಕಿ ಶಿಲ್ಪಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಭೋಜನವನ್ನು ಆಯೋಜಕರು ಏರ್ಪಡಿಸಿದ್ದರು.

6 ಮಂದಿಗೆ ಸನ್ಮಾನ..
ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಧಿಕಾರಿ ಲೋಕೇಶ್ ಎಸ್.ಆರ್, 38 ವರ್ಷ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಮುಂದಿನ ಎರಡು ತಿಂಗಳಿನಲ್ಲಿ ಸೇವಾ ನಿವೃತ್ತಿ ಹೊಂದಲಿರುವ ಉಪ್ಪಿನಂಗಡಿ ಸಂತ ಫಿಲೋಮಿನಾ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಮುಖ್ಯಗುರು ಫಿಲೋಮಿನಾ ಪಾಯಿಸ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಿರೇಬಂಡಾಡಿ ಸರಕಾರಿ ಹಿ.ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಲಲಿತಾ, ಬೆಳ್ಳಿಪ್ಪಾಡಿ ಸರಕಾರಿ ಉನ್ನತ ಹಿ.ಪ್ರಾಥಮಿಕ ಶಾಲೆಯ ಮುಖ್ಯಗುರು ಶ್ರೀಮತಿ ಯಶೋಧ ಎನ್.ಎಂ, ಕೈಕಾರ ಸರಕಾರಿ ಹಿ.ಪ್ರಾಥಮಿಕ ಶಾಲೆಯ ಮುಖ್ಯಗುರು ರಾಮಣ್ಣ ರೈ, ಶಿಕ್ಷಣ ಇಲಾಖಾ ಸಂಬಂಧ ಯಾವುದೇ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಉಪ್ಪಿನಂಗಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಮ್ಮದ್ ಅಶ್ರಫ್‌ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಸ್ಪರ್ಧೆಗಳು:
ಭರತನಾಟ್ಯ, ಜಾನಪದ ನೃತ್ಯ, ಮಿಮಿಕ್ರಿ, ಕವಾಲಿ, ಆಶು ಭಾಷಣ, ಕನ್ನಡ ಭಾಷಣ, ಧಾರ್ಮಿಕ ಪಠಣ ಅರೇಬಿಕ್, ಧಾರ್ಮಿಕ ಪಠಣ ಸಂಸ್ಕೃತ, ಕನ್ನಡ ಪ್ರಬಂಧ ಸ್ಪರ್ಧೆ, ಜಾನಪದ ಗೀತೆ, ಭಾವಗೀತೆ, ಗಝಲ್, ಹಿಂದಿ ಭಾಷಣ, ಚರ್ಚಾ ಸ್ಪರ್ಧೆ, ಕ್ವಿಜ್, ತುಳು ಭಾಷಣ, ಕವನ ವಾಚನ, ಡ್ರಾಯಿಂಗ್ ರಂಗೋಲಿ, ಇಂಗ್ಲಿಷ್ ಭಾಷಣ, ಛದ್ಮವೇಷ ಸ್ಪರ್ಧೆ, ಕಥೆ ಹೇಳುವುದು, ದೇಶ ಭಕ್ತಿಗೀತೆ, ತುಳು ಕಂಠಪಾಠ, ಇಂಗ್ಲಿಷ್ ಕಂಠಪಾಠ, ಕನ್ನಡ ಕಂಠಪಾಠ, ಅಭಿನಯ ಗೀತೆ, ಕ್ಲೇ ಮಾಡೆಲಿಂಗ್, ಹಿಂದಿ ಕಂಠಪಾಠ ಹೀಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here