ಕೆಯ್ಯೂರು ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ, ನೂತನ ಸಮಿತಿಯ  ಪದಗ್ರಹಣ ಸಮಾರಂಭ 

0

ಕೆಯ್ಯೂರು: ಕೆಪಿಎಸ್ ಕೆಯ್ಯೂರು ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ, ನೂತನ ಸಮಿತಿಯ  ಪದಗ್ರಹಣ ಸಮಾರಂಭವು ಕೆಪಿಎಸ್‌ ಕೆಯ್ಯೂರು ಪ್ರಾಥಮಿಕ ವಿಭಾಗ ಸಭಾಂಗಣದಲ್ಲಿ ನ.3ರಂದು ಸಂಜೆ 4:00ಗೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಯ್ಯೂರು ಶಾಲಾ ಹಿರಿಯ ವಿದ್ಯಾರ್ಥಿ  ಖ್ಯಾತ ವೈದ್ಯ ಡಾ.ಎ.ಕೆ ರೈ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿ, ಕೆಯ್ಯೂರಿನ ಶಾಲೆ ಈಗಿನ ಮಾಡಾವು ಹಿಂದಿನ ಕಾಲದ ಎರುಕಡಪ್ಪು ಎಂದು ಇದ್ದ ಸಂದರ್ಭದಲ್ಲಿದ್ದ ಶಾಲಾ ದಿನಗಳನ್ನು ಮೆಲುಕು ಹಾಕಿ, ಇಂತಹ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನಾನು ಅತಿಥಿಯಾಗಿ ಬಂದಿರುವುದು ಅತೀವ ಸಂತೋಷವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಕೆಯ್ಯೂರು ಶಾಲಾ ಹಿರಿಯ ವಿದ್ಯಾರ್ಥಿ ಖ್ಯಾತ ಸಾಹಿತಿ ಪ್ರೊ. ಹರಿನಾರಾಯಣ ಮಾಡಾವು ಲಾಂಛನ ಅನಾವರಣ ಮಾಡಿ, ಭಾಷಾ, ಜ್ಞಾನ, ಭಾಷಣ, ಕಲೆ, ಮಾತುಗಾರಿಕೆ ಹಾಗೂ ಸಾಹಿತ್ಯದಲ್ಲಿ ನೆಲೆಯೂರಲು ನನಗೆ ಅವಕಾಶ ಮಾಡಿಕೊಟ್ಟದ್ದು ಇದೇ ಕೆಯ್ಯೂರಿನ ಸರಕಾರಿ ಶಾಲೆ ಎಂದು ಸಂಘದ ಲಾಂಛನ ಅನಾವರಣ ಮಾಡಿ ತನ್ನ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ನೂತನ ಸಮಿತಿಯ ಪದಗ್ರಹಣ ಮತ್ತು ಸಮಿತಿಯ ಸದಸ್ಯತ್ವಕ್ಕೆ ಎಸ್ ಡಿಎಂಸಿ ಕೆಪಿಎಸ್ ಕೆಯ್ಯೂರು ಕಾರ್ಯಾಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಚಾಲನೆ ನೀಡಿ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಧ್ಯಕ್ಷ, ಹಿರಿಯ ವಿದ್ಯಾರ್ಥಿ ಕೆಪಿಎಸ್‌ ಕೆಯ್ಯೂರು ಭಾಗ್ಯೇಶ್ ರೈ ಕೆಯ್ಯೂರು ವಹಿಸಿದರು. ಗೌರವ ಉಪಸ್ಥಿತಿಯಲ್ಲಿ ಕೆಪಿಎಸ್‌ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಕೆ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆಎಸ್, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯಗುರು ಬಾಬು ಎಂ ಉಪಸ್ಥಿತರಿದ್ದರು. ಸಂಜೆ ಪದಗ್ರಹಣದ ಮೊದಲು ಜೀ ಕನ್ನಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಕಲಾವಿದ ಚಂದ್ರಶೇಖರ ಹೆಗ್ಡೆ ನೇತೃತ್ವದಲ್ಲಿ ಜಾನಪದ ರಸ ಸಂಜೆ ಕಾರ್ಯಕ್ರಮ ನಡೆಯಿತು. ಎಲ್ಲಾ ಅತಿಥಿಗಳಿಗೆ ಸ್ಮರಣೆಕೆ ನೀಡಿ ಗೌರವಿಸಲಾಯಿತು. ಹಿರಿಯ  ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹುಸೈನಾರ್ ಸಂತೋಷ್ ನಗರ, ಕೋಶಾಧಿಕಾರಿ ಆನಂದ ರೈ ದೇವಿನಗರ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ರೈ ದೇರ್ಲ, ಹನೀಫ್ ಕೆ ಎಂ, ಜಯಂತ ಪೂಜಾರಿ ಕೆಂಗುಡೇಲು, ಶಕೂರ್ ಮೇರ್ಲ, ಸಂತೋಷ್ ಕುಮಾರ್ ಸಿ ಕೆಯ್ಯೂರು, ವಿಶ್ವೇಶ್ವರ ಭಟ್ ಪಲ್ಲತ್ತಡ್ಕ, ನಾಗರಾಜ್ ಶೆಟ್ಟಿ ಅಂಕತ್ತಡ್ಕ, ಭರತ್ ಕುಮಾರ್ ಎಂ ಮಾಡಾವು, ಗೋಪಾಲಕೃಷ್ಣ ಸಂತೋಷ್ ನಗರ, ರೂಪ ಎಸ್ ರೈ ಇಳಾಂತಜೆ, ಸಹಕರಿಸಿದರು. ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಹಿರಿಯ ವಿದ್ಯಾರ್ಥಿ ಕೆಪಿಎಸ್‌ ಕೆಯ್ಯೂರು ಹಿರಿಯ ವಿದ್ಯಾರ್ಥಿ, ಸಂಘದ ಅಧ್ಯಕ್ಷ ಭಾಗ್ಯೇಶ್ ರೈ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ  ಪ್ರಮೀತ್ ರಾಜ್ ಕಟ್ಟತ್ತಾರು ವಂದಿಸಿ, ಕಾರ್ಯಕಾರಿ ಸಮಿತಿ ಸದಸ್ಯ ದಾಮೋದರ ಪೂಜಾರಿ ಕೆಂಗುಡೇಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here