ಪುತ್ತೂರು:ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಪುತ್ತೂರು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಹಲವು ಬಹುಮಾನಗಳನ್ನು ಪಡೆದು,”ಪ್ರಥಮ ಸಮಗ್ರ ಪ್ರಶಸ್ತಿ” ಯೊಂದಿಗೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುತ್ತಾರೆ.
ಕನ್ನಡ ಭಾಷಣದಲ್ಲಿ ಸಾನ್ವಿ ಎಸ್ (ಪ್ರಥಮ), ಇಂಗ್ಲೀಷ್ ಭಾಷಣದಲ್ಲಿ ವೈಷ್ಣವಿ ಪೈ (ಪ್ರಥಮ), ಸಂಸ್ಕ್ರತ ಧಾರ್ಮಿಕ ಪಠಣದಲ್ಲಿ ನಾಗಭೂಷಣ ಕಿಣಿ (ಪ್ರಥಮ), ರಂಗೋಲಿಯಲ್ಲಿ ಹಂಸಿನಿ ಆಚಾರ್ಯ (ಪ್ರಥಮ), ಜನಪದ ಗೀತೆಯಲ್ಲಿ ಸುಪ್ರಜಾ ರಾವ್ (ಪ್ರಥಮ), ಭರತನಾಟ್ಯದಲ್ಲಿ ಕೀರ್ತನಾ ವರ್ಮ (ಪ್ರಥಮ), ಚಿತ್ರಕಲೆಯಲ್ಲಿ ನಿಲಿಷ್ಕಾ (ದ್ವಿತೀಯ), ಕನ್ನಡ ಕವನ ವಾಚನದಲ್ಲಿ ಅಪೇಕ್ಷಾ (ದ್ವಿತೀಯ), ಸಂಸ್ಕ್ರತ ಭಾಷಣದಲ್ಲಿ ಅನನ್ಯಾ (ತೃತೀಯ), ಗಝಲ್ ನಲ್ಲಿ ಅಭಿಶ್ಯಾಮ (ತೃತೀಯ), ಕವ್ವಾಲಿಯಲ್ಲಿ ಅನನ್ಯಾ ನಾವಡ, ಸಾನ್ವಿ, ಧನ್ವಿ, ನಹೀಮ, ಓಂಕಾರ್ ಮಯ್ಯ ಮತ್ತು ಪ್ರಮಥೇಶ ಶರ್ಮ ಇವರ ತಂಡ (ದ್ವಿತೀಯ), ಜನಪದ ನೃತ್ಯದಲ್ಲಿ ಅಮೃತಾ, ಜನಿತಾ, ಸೃಜನಾ, ಲಹರಿ, ಆದ್ಯಾ, ಸ್ವಸ್ತಿ ಆರ್ ಶೆಟ್ಟಿ, ಅಭಿಜ್ಞಾ, ದಿಹರ್ಷಾ, ಪೂರ್ವಿ ಕೆ, ಪೂರ್ವಿ ಕೆ.ಜೆ, ಸಮನ್ವಿತಾ ಭಟ್ ಮತ್ತು ಪೃಥ್ವಿರಾಜ್ ಇವರ ತಂಡ (ತೃತೀಯ) ವಿಜೇತರಾಗಿದ್ದು, ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.