ಕಾವು: ನವೀಕೃತಗೊಂಡು ಇತ್ತೀಚೆಗೆ ಉದ್ಘಾಟನೆಯಾದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕರ್ನೂರು ಶಾಖೆಯ ನೂತನ ಕಟ್ಟಡದ ಮುಂಭಾಗದ ಇಂಟರ್ ಲಾಕ್ ಕಾಮಗಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ರೂ.2 ಲಕ್ಷ ಸಹಾಯಧನ ಚೆಕ್ ನ್ನು ಕಾವು ಸಹಕಾರ ಸಂಘದಲ್ಲಿ ಹಸ್ತಾಂತರ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಕಾವು ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಮಾಜಿ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಟಿಎಪಿಎಂಸ್ ಅಧ್ಯಕ್ಷ ಕೃಷ್ಣ ಕುಮಾರ್ ರೈ, ಕಾವು ಸಹಕಾರ ಸಂಘದ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾದ ಶ್ರೀಧರ್ ರಾವ್ ನಿಧಿಮುಂಡ, ಪ್ರವೀಣ್ ರೈ ಮೇನಾಲ, ಶಿವಪ್ರಸಾದ್ ಕೊಚ್ಚಿ, ಲೋಕೇಶ್ ಚಾಕೋಟೆ, ಮಂಜುನಾಥ ರೈ ಸಾಂತ್ಯ, ರಾಮಣ್ಣ ನಾಯ್ಕ, ಲೋಹಿತ್ ಅಮ್ಚಿನಡ್ಕ, ಮೋಹನಾಂಗಿ ಬೀಜಂತ್ತಡ್ಕ, ಹೇಮಾವತಿ ಚಾಕೋಟೆ, ಲೆಕ್ಕಿಗ ಅಭಿಷೇಕ್ ಪಿ.ಎಸ್ ಸೇರಿದಂತೆ ಸಂಘದ ಸಿಬ್ಬಂದಿಗಳು ಸದಸ್ಯರುಗಳು ಉಪಸ್ಥಿತರಿದ್ದರು.