ಬಡಗನ್ನೂರು: ಕಾಡು ಹಂದಿ ದಾಳಿ- ಪೈರು ನಾಶ

0

ಬಡಗನ್ನೂರು: ಕಾಡು ಹಂದಿ ನಾಡಿಗೆ ಬಂದು ಕೃಷಿ ನಾಶಪಡಿಸಿದ ಬಗ್ಗೆ ವರದಿಯಾಗಿದೆ.

ಬಡಗನ್ನೂರು ಗ್ರಾಮದ ಪೇರಾಲು ಪರಿಸರದಲ್ಲಿ ಹೊಲದಲ್ಲಿ ಬೆಳೆದ ಪೈರು ನಾಶಪಡಿಸಿದ್ದು ಅಪಾರ ನಷ್ಟ ಸಂಭವಿಸಿದೆ. 

ಕಾಡು ಹಂದಿಗಳು ರಾತ್ರಿ ಹೊತ್ತಿನಲ್ಲಿ ತಮ್ಮ ಮರಿಗಳ ಜೊತೆಗೆ ಗದ್ದೆಯಲ್ಲಿ ಬೆಳೆದ ಪೈರು ನಾಶಪಡಿಸಿದೆ. ಸುಮಾರು 5 ರಿಂದ 6  ಕಿಂಟ್ವಾಲ್ ಗಳಷ್ಟು ನಷ್ಟ ಸಂಭವಿಸಿದೆ.

ಯಾವುದೇ ಸದ್ದಿಗೆ ಹೆದರುವುದಿಲ್ಲ;-
ಹಿಂದಿನ ಕಾಲದ ಹಂದಿಗಳು ಹೊಲಕ್ಕೆ ಅಥವಾ ತೋಟಕ್ಕೆ ಬಂದಲ್ಲಿ ಯಾವುದೇ ತರದ ಸದ್ದು ಮಾಡಿದಾಗ ಹೆದರಿ ಹೋಗುತ್ತಿದವು. ಅದರೆ ಈಗ  ಬೇಟೆ ಕಾನೂನಿನ ದೃಷ್ಟಿಯಿಂದ ಅಪರಾಧ ಎಂದು ಸರಕಾರ ಅದೇಶದ ಬಳಿಕ ಬೇಟೆಯಾಡುವುದು ಕೊಂಚಮಟ್ಟಿಗೆ ಕಡಿಮೆಯಾಗಿದೆ. ಇದರಿಂದ ಪಟಾಕಿ ಮತ್ತು ಇನ್ನಿತರ ಸದ್ದುಗಳಿಗೆ ಯಾವುದೇ ಭಯ ಇರುವುದಿಲ್ಲ.

ಹಗಲು ಹೊತ್ತಿನಲ್ಲಿ ಮಂಗನ ಕಾಟ:-
ಹಗಲು ಮಂಗಗಳ ಹಾವಳಿ, ರಾತ್ರಿ ಹಂದಿಗಳ ಹಾವಳಿ, ಒಟ್ಟಾರೆ ರೈತರು ಕಷ್ಟ ಪಟ್ಟು ದುಡಿದು ಫಲ ಸಿಗುವ ಸಂದರ್ಭದಲ್ಲಿ ಕಾಡುಪ್ರಾಣಿಗಳಿಂದ ಕೃಷಿ ನಾಶವಾಗುತ್ತಿದೆ.  ಈ ಬಗ್ಗೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿದಿಗಳು, ಗಮನಿಸಿ ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾದ ಕೃಷಿ ನಾಶಕ್ಕೂ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರ ಆಗ್ರಹ. 

LEAVE A REPLY

Please enter your comment!
Please enter your name here