ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ವಸ್ತ್ರಸಂಹಿತೆ ಪಾಲಿಸುವಂತೆ ದೇವಳದ ಎದುರು ಫಲಕ ಅಳವಡಿಸಲಾಗಿದೆ.
‘ದೇವರ ದರ್ಶನಕ್ಕೆ ಬರುವಾಗ ಸಾಧ್ಯವಾದಷ್ಟು ಸ್ವಚ್ಛವಾದ, ಶುಭ್ರವಾದ, ಸಭ್ಯವಾದ ಉಡುಪುಗಳನ್ನು ಧರಿಸಿಯೇ ಬನ್ನಿ’ ಎಂದು ಫಲಕದಲ್ಲಿ ಬರೆದಿದ್ದು, ಅದರ ಕೆಳಗಡೆ ಸಭ್ಯ ಉಡುಪು ಧರಿಸಿದ ಮಹಿಳೆ, ಯುವತಿ, ಪುರುಷ, ಯುವಕನ ಚಿತ್ರ ಹಾಕಲಾಗಿದೆ.ಆದಷ್ಟು ಸಭ್ಯವಾದ ಉಡುಪನ್ನು ಧರಿಸಿಯೇ ಬರುವಂತೆ ದೇವಳದ ಆಡಳಿತಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.