ನ.16: ಕುಂಬ್ರದಲ್ಲಿ ವರ್ತಕರ ಸಂಘದ 20 ನೇ ವರ್ಷಾಚರಣೆ

0

ಪೊರ್ಲುದ ಕುಂಬ್ರ ಸೆಲ್ಫೀ ಪಾಯಿಂಟ್ ಉದ್ಘಾಟನೆ, ಸನ್ಮಾನ ಕಾರ್ಯಕ್ರಮ

ಪುತ್ತೂರು: ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹತ್ತೂರಿನಲ್ಲಿ ಪ್ರಚಾರದಲ್ಲಿರುವ ಪುತ್ತೂರಿನ ಕುಂಬ್ರದ ವರ್ತಕರ ಸಂಘಕ್ಕೆ 20 ವರ್ಷಗಳು ತುಂಬುತ್ತಿದ್ದು ಸಂಘದ 20 ನೇ ವರ್ಷಾಚರಣೆ ‘ವರ್ತಕ ಸಂಭ್ರಮ’ ಹಾಗೂ ‘ಪೊರ್ಲುದ ಕುಂಬ್ರ’ ಸೆಲ್ಫೀ ಪಾಯಿಂಟ್ ಇದರ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮ ನ.16 ರಂದು ಸಂಜೆ ಕುಂಬ್ರ ಜಂಕ್ಷನ್‌ನಲ್ಲಿ ನಡೆಯಲಿದೆ.

ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಸೆಲ್ಫೀ ಪಾಯಿಂಟ್ ಅನ್ನು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಗ್ರಾಮಾಂತರ ಠಾಣಾ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ,ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ,ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಚ್.ಶಿವಶಂಕರ್, ಅಕ್ಷಯ ಕಾಲೇಜು ಸಂಚಾಲಕ, ಉದ್ಯಮಿ ಜಯಂತ ನಡುಬೈಲ್,ವಿಶ್ರಾಂತ ಪ್ರಾಂಶುಪಾಲ ಝೇವಿಯರ್ ಡಿ’ಸೋಜಾ,ಆಕರ್ಷಣ್ ಇಂಡಸ್ಟ್ರೀಸ್ ಮಾಲಕರಾದ ಮಹಮ್ಮದ್ ಸಾದಿಕ್ ಹಾಜಿ, ಕುಂಬ್ರ ಮಾತೃಶ್ರೀ ಅರ್ಥ್ ಮೂವರ‍್ಸ್ ಮಾಲಕ ಮೋಹನದಾಸ ರೈ ಕುಂಬ್ರ, ಪುತ್ತೂರುವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಪತ್ರಕರ್ತ ಸಿಶೇ ಕಜೆಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸನ್ಮಾನ ಕಾರ್ಯಕ್ರಮ
ಶಿಕ್ಷಣ ಕ್ಷೇತ್ರದ ಸಾಧಕಿ ಸನ್ನಿಧಿ ಎನ್.ಕುರಿಕ್ಕಾರ ಒಳಮೊಗ್ರು, ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್‌ನ ಸ್ವಚ್ಛ ವಾಹಿನಿಯ ಸ್ವಚ್ಛ ಸೇನಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.


ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
ಸಭಾ ಕಾರ್ಯಕ್ರಮದ ಮೊದಲು ಹಾಗೂ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಲಿದೆ.ಕುಂಬ್ರ ವರ್ತಕರ ಸಂಘದ ಸದಸ್ಯರ ಮಕ್ಕಳಿಂದ ಮತ್ತು ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಅಕ್ಷಯ ಕಾಲೇಜು ಸಂಪ್ಯ ಪುತ್ತೂರು ಇವರಿಂದ ‘ಅಕ್ಷಯ ಕಲಾ ವೈಭವ’ ಮನರಂಜಿಸಲಿದೆ. ಕಾರ್ಯಕ್ರಮದ ಕೊನೆಯಲ್ಲಿ ವರ್ತಕರ ಸಂಘ ಏರ್ಪಡಿಸಿದ್ದ ಅದೃಷ್ಟ ಚೀಟಿಯ ಡ್ರಾ ಕಾರ್ಯಕ್ರಮ ನಡೆಯಲಿದೆ. ಗ್ರಾಹಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಕೋಶಾಧಿಕಾರಿ ಸಂಶುದ್ಧೀನ್ ಎ.ಆರ್, ಗೌರವ ಸಲಹೆಗಾರರಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಲ್ಫೀ ಪಾಯಿಂಟ್ ಉದ್ಘಾಟನೆ
ಗ್ರಾಮೀಣ ಭಾಗದಲ್ಲೇ ಹೊಸತಾಗಿ ತೆರೆದುಕೊಳ್ಳಲಿರುವ ವಿನೂತನ ಮಾದರಿಯ ‘ಸೆಲ್ಪೀ ಪಾಯಿಂಟ್’ ಕುಂಬ್ರ ಪೇಟೆಯ ಜಂಕ್ಷನ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮುಕ್ರಂಪಾಡಿಯ ಆಕರ್ಷಣ್ ಇಂಡಸ್ಟ್ರೀಸ್‌ರವರ ಕಲ್ಪನೆಯಲ್ಲಿ ಬಾಂತಲಪ್ಪು(ಕುಂಬ್ರದ ಹಿಂದಿನ ಹೆಸರು)ವಿನ ಸೊಬಗನ್ನು ಉಣ ಬಡಿಸುವ ಸೆಲ್ಫೀ ಪ್ರಿಯರಿಗೆ ಅಚ್ಚುಮೆಚ್ಚಾಗಲಿರುವ ಸೆಲ್ಫೀ ಪಾಯಿಂಟ್ ಅನ್ನು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಲೋಕಾರ್ಪಣೆಗೊಳಿಸಲಿದ್ದಾರೆ.

LEAVE A REPLY

Please enter your comment!
Please enter your name here