ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ನಾಣಿಲದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾರ್ಥಿ ನಾಯಕಿ ಅಸ್ಮಿತ ವಹಿಸಿದರು. ಅತಿಥಿಗಳಾಗಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ, ಮುಖ್ಯಗುರು ಪದ್ಮಯ್ಯ ಗೌಡ, ತರಗತಿ ನಾಯಕರಾದ ರಿತೇಶ್, ನಿವೇದ್, ಸುಕನ್ಯಾ, ವರ್ಣಿಕ ಡಿ ವಿ, ಚಾರ್ವಿ, ಶಾನ್ವಿ , ಕೀರ್ತಿಕಾ ಉಪಸ್ಥಿತರಿದ್ದರು.
ಮಕ್ಕಳ ದಿನದ ಮಹತ್ವದ ಬಗ್ಗೆ ಸಹ ಶಿಕ್ಷಕ ಸುನಿಲ್ ಮಾತನಾಡಿದರು. ಈ ಸಂದರ್ಭದಲ್ಲಿ ಮಕ್ಕಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಸಹ ಶಿಕ್ಷಕರಾದ ಮೋಹಿನಿ, ಶೋಭಾ, ನಂದಿನಿ, ಚೇತನ, ಶ್ವೇತಾರವರು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದರು. ಕುಮಾರಿ ಮಾನ್ವಿ ಸ್ವಾಗತಿಸಿ, ಕಾವ್ಯ ವಂದಿಸಿದರು. ವಂಶಿಕ ಡಿ ವಿ ನಿರೂಪಿಸಿದರು.