ಪುತ್ತೂರು: ದಂತ ವೈದ್ಯಕೀಯದ ಡೆಂಟಲ್ 2D, 3D(CBCT) ಸ್ಕ್ಯಾನಿಂಗ್ನ ದಂತ 360 ಇಮೇಜಿಂಗ್ ಸೆಂಟರ್ ಬೊಳುವಾರು ಪದ್ಮ ಆರ್ಕಡೆಯ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು. ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯ ಡಾ.ಎ.ಪಿ.ಭಟ್ ಸೆಂಟರ್ನ್ನು ಉದ್ಘಾಟಿಸಿ ಶುಭಹಾರೈಸಿದರು. ಪದ್ಮ ಆರ್ಕಡೆಯ ಮಾಲಕ ಪದ್ಮನಾಭ ಶೆಟ್ಟಿ, ದಂತ ವೈದ್ಯರುಗಳಾದ ಡಾ.ಮಹೇಶ್, ಡಾ.ಸಿದ್ದಲಿಂಗ ಕಡಬ, ಡಾ.ಶಿವರಾಮ ಉಪ್ಪಿನಂಗಡಿ ಉಪಸ್ಥಿತರಿದ್ದರು. ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕ ಡಾ.ರಾಮಪ್ರಕಾಶ್ ಬಿ. ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.