ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮಾಡನ್ನೂರು, ಅಮ್ಚಿನಡ್ಕ, ಮುಖಾರಿಮೂಲೆ, ಮಳಿ ಪ್ರದೇಶ, ಅಣಿಗುಂಡಿ, ಕನಕಮಜಲು, ನೂಜಿಬೈಲು, ದೇಲಂಪಾಡಿ ಹಾಗೂ ಬಡಗನ್ನೂರು ಗ್ರಾಮದ ಮೈಂದನಡ್ಕ ಭಾಗಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಇದರಿಂದ ಗ್ರಾಮಸ್ಥರು ಕಂಗಾಲಗಿದ್ದಾರೆ.
ಅಡಿಕೆ, ತೆಂಗು, ಬಾಳೆಗಿಡ, ಕೊಕ್ಕೋ, ಕರಿಮೆಣಸು, ಸೇರಿದಂತೆ ಇನ್ನಿತರ ಕೃ಼ಷಿಯನ್ನು ಹೊಂದಿರುವ ರೈತರು ಕಾಡಾನೆ, ಕಾಡುಹಂದಿ, ಕಾಡುಕೋಣಗಳ ದಾಳಿಯಿಂದ ತೊಂದರೆ ಅನುಭವಿಸುವಂತಾಗಿದೆ. ಕೃಷಿಯನ್ನೇ ಅವಲಂಭಿಸಿರುವ ರೈತರಿಗೆ ದಿಕ್ಕೆ ತೋಚದಂತಾಗಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅನೇಕ ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುಖಾಂತರ ಅರಣ್ಯ ಸಚಿವರಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರೈತರು ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.