ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜ್ಜಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಒಳಮೊಗ್ರು ಗ್ರಾ.ಪಂ ಮತ್ತು ಸುಗ್ರಾಮ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘಟನೆ ಸಹಯೋಗದಲ್ಲಿ ಮಹಿಳಾ ಜಾಗೃತಿ ವೇದಿಕೆ ಸಭೆಯು ನ.15 ರಂದು ನಡೆಯಿತು.
ಸಭೆಯಲ್ಲಿ ಸ್ವಚ್ಛತೆ ಬಗ್ಗೆ ಚರ್ಚಿಸಲಾಯಿತು. ಗ್ರಾಪಂನ ಸ್ವಚ್ಚವಾಹಿನಿ ವಾಹನಕ್ಕೆ ಕಸವನ್ನು ನೀಡುವುದು, ಗ್ರಾಮ ಸಭೆಗೆ ಮತ್ತು ವಾರ್ಡ್ ಸಭೆಯಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸುವಂತೆ ಚರ್ಚಿಸಲಾಯಿತು. ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಚೀಟಿ ಮಾಡಿಸದವರು ಚೀಟಿಯನ್ನು ಮಾಡಿಸಿ ವೈಯುಕ್ತಿಕ ಕಾಮಗಾರಿಯನ್ನು ಕ್ರೀಯಾ ಯೋಜನೆಯಲ್ಲಿ ಸೇರಿಸುವಂತೆ ಜಾಗೃತಿ ಮೂಡಿಸಲಾಯಿತು. ಅಪೌಷ್ಠಿಕ ಮಕ್ಕಳ ಮತ್ತು ಕಿಶೋರಿಯರ ಸುರಕ್ಷತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ವಾರ್ಡ್ ಸದಸ್ಯರಾದ ವನಿತಾ ಮನೋಜ್, ನಳಿನಾಕ್ಷಿ ಕೇರಿ, ಸುಗ್ರಾಮ ಸಂಯೋಜಕಿ ಕಾವೇರಿ, ಅಂಗನವಾಡಿ ಕಾರ್ಯಕರ್ತೆ ಗೀತಾ, ಸಹಾಯಕಿ ರತಿ ಮತ್ತು ಮಹಿಳಾ ಪೋಷಕರು ಉಪಸ್ಥಿತರಿದ್ದರು.