ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿ ಧನ್ಯಶ್ರೀ ಇನ್ನೋವೆಟಿವ್ ಸೈನ್ಸ್ ಮಾಡೆಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು : ವಿದ್ಯಾ ಭಾರತಿ ಆಯೋಜಿಸಿರುವ ಶಾರದಾ ವಿದ್ಯಾನಿಕೇತನ ತಲಪಾಡಿ ಮಂಗಳೂರುನಲ್ಲಿ ನಡೆದ ಇನ್ನೋವೆಟಿವ್ ಸೈನ್ಸ್ ಮಾಡೆಲ್ ನಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ ಧನ್ಯಶ್ರೀ ಎಚ್.ಪಿ (ಪ್ರಕಾಶ್ ಎಚ್.ಕೆ ಮತ್ತು ಮಾಲಿನಿ ಕೆ.ಎನ್ ದಂಪತಿಯ ಪುತ್ರಿ)ಜಿಲ್ಲಾಮಟ್ಟ, ರಾಜ್ಯಮಟ್ಟ ಮತ್ತು ದಕ್ಷಿಣ ವಲಯ ಮಟ್ಟಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದೇ ತರಗತಿಯ ಆಪ್ತ ಚಂದ್ರಮತಿ ಮುಳಿಯ( ಕೇಶವ ಪ್ರಸಾದ್ ಮುಳಿಯ, ಕೃಷ್ಣವೇಣಿ ಮುಳಿಯ ದಂಪತಿ ಪುತ್ರಿ) ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here