ಪುತ್ತೂರು: ಬಾಲ ಭವನ ಸೊಸೈಟಿ, ಬೆಂಗಳೂರು ಇದರ ಕಾರ್ಯದರ್ಶಿಗಳ ಆದೇಶದಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ದಕ್ಷಿಣ ಕನ್ನಡ ಮಂಗಳೂರು ಇದರ ಆಶ್ರಯದಲ್ಲಿ 2024-25ನೇ ಸಾಲಿನ ಜಿಲ್ಲಾಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಸ್ಪರ್ಧೆಯಲ್ಲಿ ಸಮೃದ್ಧ ಆರ್ ಶೆಟ್ಟಿ ’Avishkar’ the land mine detection ಎಂಬ ವಿಜ್ಞಾನ ಮಾದರಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಸಮೃದ್ಧ ಆರ್ ಶೆಟ್ಟಿ ಶಿಕ್ಷಕ ಪುತ್ತೂರಿನ ರಾಮಚಂದ್ರ ಕೆ ಮತ್ತು ಶೋಭಾ ದಂಪತಿ ಪುತ್ರ.