ಕಾವು: ಮಾಡ್ನೂರು ಗ್ರಾಮದ ಕಾವು ನನ್ಯ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ನ 14 ರಂದು ನಡೆಯಿತು.
ಕಾರ್ಯಕ್ರಮವನ್ನು ಪುಟಾಣಿ ಪರೀಕ್ಷಿತ್ ಉದ್ಘಾಟಿಸಿದರು.ಬಳಿಕ ಪುಟಾಣಿಗಳು ನೆಹರು ಕುರಿತು ಮಾತನಾಡಿದರು.ನಂತರ ಪುಟಾಣಿಗಳಿಂದ ನೃತ್ಯ, ಕಥೆ, ಅಭಿನಯ ಗೀತೆ ವಾರದ ವಿಷಯದ ಬಗ್ಗೆ ಪರಿಚಯ ಮಾಡಿ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಂತ್ವನ ಸಮಲೋಚನಾ ಇಲಾಖೆಯ ಅಧಿಕಾರಿಗಳಾದ ಸೌಮ್ಯ, ಶ್ವೇತಾ, ನನ್ಯ ಶಾಲಾ ಮುಖ್ಯಗುರು ಮೇಬಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಆಶಾ ಕಾರ್ಯಕರ್ತೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.ಸಮನ್ವಯ ಸಮಿತಿ ಅಧ್ಯಕ್ಷರು,ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಕ್ಕಳಿಗೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಚಂದ್ರಶೇಖರ ಬಲ್ಯಾಯ ಬಹುಮಾನದ ಪ್ರಯೋಜಕತ್ವ ನೀಡಿದ್ದರು. ಊಟದ ಪ್ರಯೋಜಕತ್ವವನ್ನು ಪೋಷಕರು ಶ್ರೀಶಕ್ತಿ ಸದಸ್ಯರು,ಪಾಯಸದ ಪ್ರಯೋಜಕತ್ವ ಉದಯಚಂದ್ರ ಪಟ್ಟುಮೂಲೆ ನೀಡಿದ್ದರು. ಪುಟಾಣಿ ಮಕ್ಕಳಾದ , ಪರೀಕ್ಷಿತ್,ಶ್ರೀಹಾನ್,ವೈಷ್ಣವಿ,ಮೋನಿಷ್ ,ಪಲ್ಲವಿ, ಚಿತೇಶ್, ನಿವೇದ್, ಶಿವಾಂಶು ಕೃಷ್ಣ ,ಐರಾ,ಶಸ್ತಾ ಪ್ರಾರ್ಥಿಸಿದರು. ಐರ ಸ್ವಾಗತಿಸಿದರು. ಶ್ರೀಹಾನ್ ವಂದಿಸಿದರು.ಮೋನಿಶ್ ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ, ಸಹಾಯಕಿ ಶಾರದಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.