ಪುತ್ತೂರು: ಪುತ್ತೂರು ನಗರದ ಹೊರ ವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್(ಯೇಸುವಿನ ಪವಿತ್ರ ಹೃದಯದ ದೇವಾಲಯ)ನಲ್ಲಿ ನ.20ರಂದು ವಾರ್ಷಿಕ ಮಹೋತ್ಸವ ಜರಗಲಿದೆ.
ಪ್ರಧಾನ ಗುರುಗಳಾಗಿ ಸೆಕ್ರೇಡ್ ಹಾರ್ಟ್ ಚರ್ಚ್ ನಿಕಟಪೂರ್ವ ಧರ್ಮಗುರು ಪ್ರಸ್ತುತ ಜೆಪ್ಪು ಸಂತ ಜೋಸೆಫ್ ನಿವಾಸದಲ್ಲಿ ವಾಸವಾಗಿರುವ ವಂ|ವಲೇರಿಯನ್ ಫ್ರ್ಯಾಂಕ್ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಜ್ಯುಡೀಶಿಯಲ್ ವಿಕಾರ್ ವಂ|ನವೀನ್ ಪಿಂಟೊರವರು ಭಾಗವಹಿಸಲಿರುವರು. ಹಬ್ಬದ ಸಂದೇಶವನ್ನು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಹ ಆಡಳಿತಾಧಿಕಾರಿ ವಂ|ಡೊನಾಲ್ಡ್ ನಿಲೇಶ್ ಕ್ರಾಸ್ತಾರವರು ನೀಡಲಿರುವರು. ಜೊತೆಗೆ ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಸಹಿತ ವಲಯದ ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂದು ಚರ್ಚ್ ಪ್ರಧಾನ ಧರ್ಮಗುರು ವಂ|ಜೆ.ಬಿ ಮೊರಾಸ್, ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶಿ ಎಡ್ವಿನ್ ಡಿ’ಸೋಜ, 21 ಆಯೋಗಗಳ ಸಂಚಾಲಕ ಪ್ರೇಮ್ ಕುಮಾರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.