ಪುತ್ತೂರು: ನೆಹರೂನಗರ ನಿವಾಸಿ, ವಿವೇಕಾನಂದ ಕಾಲೇಜು ಕಚೇರಿ ನಿವೃತ್ತ ಉದ್ಯೋಗಿ ಕುಂಞಣ್ಣ ಗೌಡ ಅವರ ಪತ್ನಿ ಶ್ರೀಮತಿ ಯೋಗಿನಿ(65)ನ. 22ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತಿ, ಪುತ್ರ ಬಿಎಸ್ಎನ್ಎಲ್ ಉದ್ಯೋಗಿ ವಿಜೇತ್, ಸೊಸೆ ಪುನೀತಾ, ಮಗಳು ವಿವೇಕಾನಂದ ಕಾಲೇಜು ಪ್ರಾಧ್ಯಾಪಕಿ ವಿದ್ಯಾ, ಮಗ ವಿಕ್ರಮ್, ಅಳಿಯ ನ್ಯಾಯವಾದಿ ಕಕ್ವೆ ಕೃಷ್ಣಪ್ಪ ಗೌಡ ಮತ್ತು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಬಂಧುಮಿತ್ರರು ಹಾಗೂ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ನಮನಗಳನ್ನು ಸಲ್ಲಿಸಿದರು.