ಪಡ್ನೂರು:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಪಡ್ನೂರು ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಡ್ನೂರು ಗ್ರಾಮ ಸಮಿತಿಯಿ ಅಧ್ಯಕ್ಷ ಹರಿಶ್ಚಂದ್ರ ಗೌಡ ಮೂವಪ್ಪು ನೆರವೇರಿಸಿದರು. 6 ದಂಪತಿಗಳಿಗೆ ಸನ್ಮಾನ ಮಾಡಲಾಯಿತು.ಕುಂಜಾರು ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ಪೂವಪ್ಪ ಗೌಡ ,ಕುಂಜಾರು ಶ್ರೀಮತಿ ರಾಮಕ್ಕ ಮತ್ತು ಶ್ರೀ ತಿಮ್ಮಪ್ಪ ಗೌಡ ,ಕುಂಜಾರು ಶ್ರೀಮತಿ ಪೂವಕ್ಕ ಮತ್ತು ದೂಮಣ್ಣ ಗೌಡ ,ಮೂವಪ್ಪು ಶ್ರೀಮತಿ ಕಲ್ಯಾಣಿ ಮತ್ತು ಶ್ರೀ ರಾಮಣ್ಣ ಗೌಡ ಹೊಸಮಾರು,ನೆಲಪ್ಪಲು ಶ್ರೀಮತಿ ವಸಂತ ಮತ್ತು ಶ್ರೀ ಎಲ್ಯಣ್ಣಗೌಡ, ಆಟಿಕ್ಕು ಶ್ರೀಮತಿ ಜಾನಕಿ ಮತ್ತು ಶ್ರೀ ಶೇಷಪ್ಪ ಗೌಡ ಇವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ವಿದ್ವಾಂಸರು ಮತ್ತು ಅಧ್ಯಕ್ಷರು ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವೆಂಕಟರಮಣ ಗೌಡ ಕಳುವಾಜೆ ತುಳು, ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ (ರಿ.) ನಿರ್ದೇಶಕ ಆನಂದ ಗೌಡ ಮೂವಪ್ಪುರು,ಒಕ್ಕಲಿಗ ಗೌಡ ಸೇವಾ ಸಂಘ ಒಕ್ಕೂಟ ಅಧ್ಯಕ್ಷೆ ಕುಸುಮಾವತಿ, ಖಜಾಂಜಿ ಶಿವರಾಮ ಗೌಡ ಮತಾವು, ಊರ ಗೌಡರಾದ ರಮೇಶ್ ಗೌಡ ಮತಾವು, ಬಾಲಕೃಷ್ಣ ಗೌಡ ಮೂವಪ್ಪು, ಸಂಕಪ್ಪ ಗೌಡ ಕುಂಬ್ಲಾಡಿ,ಉಪನ್ಯಾಸಕ ಯಶವಂತ ಗೌಡ ಮತಾವು ಉಪಸ್ಥಿತರಿದ್ದರು .ನಮಿತಾ ಪಾರ್ಥಿಸಿದರು, ಶಿವರಾಮ ಮತಾವು ಸ್ವಾಗತಿಸಿದರು. ವಲಯದ ಮೇಲ್ವಿಚಾರಕಿ ಸುಮಲತಾ ವಂದಿಸಿದರು.ಪೂವಪ್ಪ ಗೌಡ ದೆಂತಾರು ನಿರೂಪಿಸಿದರು.